ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಆರೋಪ: ಕಾಪು ವೃತ್ತ ವ್ಯಾಪ್ತಿಯಲ್ಲಿ 92 ವಾಹನ ವಶಕ್ಕೆ
ಕಾಪು : ಕಾಪು ಇನ್ಸ್‍ಪೆಕ್ಟರ್ ಕಚೇರಿ ವ್ಯಾಪ್ತಿಯಲ್ಲಿ ಒಟ್ಟು 92 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಕೋವಿಡ್-19 ಮಾರ್ಗಸೂಚಿ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿ ಎಪ್ರಿಲ್ 21ರಿಂದ ಮೇ 20ರವರೆಗೆ ಒಟ್ಟು 41 ಪ್ರಕರಣಗಳು ಹಾಗೂ ಅನಗತ್ಯ ವಾಹನ ಸಂಚಾರಕ್ಕೆ ಸಂಬಂಧಿಸಿ 92 ವಾಹನಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ವಿವಿಧೆಡೆಗಳಲ್ಲಿ ಮಾರ್ಗಸೂಚಿ ಉಲ್ಲಂಘನೆ ಸಂಬಂಧಿಸಿ ಕಾಪು ಇನ್ಸ್‍ಪೆಕ್ಟರ್ ಕಚೇರಿಯಿಂದ 10, ಕಾಪು ಠಾಣೆಯಲ್ಲಿ 12, ಶಿರ್ವ 8, ಪಡುಬಿದ್ರಿ 11 ಪ್ರಕರಣಗಳು ದಾಖಲಾಗಿವೆ. ಅನಗತ್ಯ ವಾಹನ ಸಂಚಾರಕ್ಕೆ ಸಂಬಂಧಿಸಿ ಕಾಪು ಇನ್ಸ್ ಪೆಕ್ಟರ್ ಕಚೇರಿಯಿಂದ 17 ವಾಹನಗಳು, ಕಾಪು ಠಾಣೆ ವ್ಯಾಪ್ತಿಯಲ್ಲಿ 37 ವಾಹನಗಳು, ಶಿರ್ವ ಠಾಣಾ ವ್ಯಾಪ್ತಿಯಲ್ಲಿ 23 ವಾಹನಗಳು, ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ 15 ವಾಹನಗಳು ಸೇರಿ ಒಟ್ಟು 92 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇನ್ಸ್‍ಪೆಕ್ಟರ್ ಪ್ರಕಾಶ್ ತಿಳಿಸಿದ್ದಾರೆ.
ಕಟ್ಟು ನಿಟ್ಟಿನ ತಪಾಸಣೆ: ಕಾಪು ಇನ್ಸ್‍ಪೆಕ್ಟರ್ ಕಚೇರಿ ವ್ಯಾಪ್ತಿಯ ಪಡುಬದ್ರಿ, ಕಾಪು, ಶಿರ್ವ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾ ಗುತ್ತಿದೆ. ಅನಗತ್ಯ ಸಂಚಾರ ನಡೆಸುವ ವಾಹನಗಳ ವಿರುದ್ಧ ಪೊಲೀಸರು ಕ್ರಮಕೈಗೊಳ್ಳುತ್ತಿದ್ದಾರೆ. ಬುಧವಾರ ಮುದರಂಗಡಿಯಲ್ಲಿ ಕ್ರಿಕೆಟ್ ಆಡ ಆಡುತಿದ್ದ ತಂಡದ ಮೇಲೂ ಇನ್ಸ್‍ಪೆಕ್ಟರ್ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.