×
Ad

ಸೂರಿಂಜೆ ಗದ್ದೆಗಳಲ್ಲಿದ್ದುದು ರಿಫೈನರಿ ತೈಲವಲ್ಲ: ಮಂಡಳಿ

Update: 2021-05-20 23:07 IST

ಮಂಗಳೂರು, ಮೇ 20: ನಗರ ಹೊರವಲಯದ ಸೂರಿಂಜೆ ಪರಿಸರದ ಕೆಲವು ಭತ್ತದ ಗದ್ದೆಗಳಲ್ಲಿ ಪತ್ತೆಯಾಗಿರುವುದು ರಿಫೈನರಿ ತೈಲವಲ್ಲ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಪಷ್ಟಪಡಿಸಿದೆ.

ಈ ಭಾಗದ ಗದ್ದೆಗಳಲ್ಲಿ ತೈಲ ಸೋರಿಕೆಯಾಗಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಎಂಆರ್‌ಪಿಎಲ್‌ನ ಪರಿಸರ ಇಂಜಿನಿಯರ್‌ಗಳು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಜೊತೆಗೂಡಿ ಗುರುವಾರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಧಿಕಾರಿಗಳು ಎಂಆರ್‌ಪಿಎಲ್‌ನಿಂದ ತೈಲ ಸೋರಿಕೆ ಆಗಿಲ್ಲ. ಅದು ರಿಫೈನರಿ ತೈಲವಲ್ಲ ಎಂಬುದು ಖಚಿತ ಪಟ್ಟಿದೆ. ಅಲ್ಲಿ ಕಂಡು ಬಂದಿರುವ ತೈಲದ ಅಂಶ ಜೈವಿಕವಾಗಿ ಉತ್ಪತ್ತಿಯಾಗಿದೆ.ಹೆಚ್ಚಿನ ಪರಿಶೀಲನೆಗಾಗಿ ತೈಲದ ಮಾದರಿಯನ್ನು ಸಂಗ್ರಹಿಸಲಾ ಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News