×
Ad

ಮಾಸ್ಕ್‌, ಸಾಮಾಜಿಕ ಅಂತರವಿಲ್ಲದೇ ಮದುವೆಯಲ್ಲಿ ಭಾಗಿಯಾದವರನ್ನು ʼಕಪ್ಪೆ ಕುಣಿತʼ ಮಾಡಿಸಿದ ಪೊಲೀಸರು

Update: 2021-05-21 12:46 IST

ಭಿಂದ್:‌ ಸರಕಾರ ಸೂಚಿಸಿರುವ ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸದೇ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮರಳುತ್ತಿದ್ದ 35 ಮಂದಿ ಅತಿಥಿಗಳನ್ನು ಪೊಲೀಸರು ರಸ್ತೆಯಲ್ಲಿ ʼಕಪ್ಪೆ ಕುಣಿತʼ ಮಾಡಿಸಿರುವ ಘಟನೆ ವರದಿಯಾಗಿದೆ ಈ ಕುರಿತಾದಂತೆ ವೀಡಿಯೋವೊಂದು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ. ಮಕ್ಕಳು ಮತ್ತು ಹಿರಿಯರನ್ನೂ ಶಿಕ್ಷೆಗೆ ಒಳಪಡಿಸಿರುವುದರ ಕುರಿತು ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ.

35 ಮಂದಿ ಮದುವೆ ಕಾರ್ಯಕ್ರಮ ಮುಗಿಸಿ ಟ್ರ್ಯಾಕ್ಟರ್‌ ಟ್ರೋಲಿಯೊಂದರಲ್ಲಿ ಕುಳಿತು ತಮ್ಮ ಮನೆಗೆ ಮರಳುತ್ತಿದ್ದರು. ಈ ವೇಳೆ ಯಾರೂ ಮಾಸ್ಕ್‌ ಧರಿಸಿರಲಿಲ್ಲ ಮತ್ತು ಸಾಮಾಜಿಕ ಅಂತರ ಪಾಲಿಸಿರಲಿಲ್ಲ ಎನ್ನಲಾಗಿದೆ. ಈ ವೇಳೆ ಪೊಲೀಸರು ಅವರೆಲ್ಲರನ್ನೂ ಕೆಳಗಿಳಿಸಿ ರಸ್ತೆಯಲ್ಲೇ ಕಪ್ಪೆ ಕುಣಿತ ಮಾಡಿಸಿದ್ದಾರೆ. ಪೊಲೀಸರು ಲಾಠಿ ಹಿಡಿದುಕೊಂಡು ಬೆದರಿಸುತ್ತಿರುವ ದೃಶ್ಯಗಳನ್ನೂ ವೀಡಿಯೋದಲ್ಲಿ ಕಾಣಬಹುದಾಗಿದೆ.

ಇವರ ವಿರುದ್ಧ ಬೇರೆ ಯಾವುದೇ ಪ್ರಕರಣಗಳನ್ನು ದಾಖಲಿಸಿಲ್ಲ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News