ʼತಿರುಚಲ್ಪಟ್ಟ ಸುದ್ದಿʼ ಲೇಬಲ್‌ ತೆಗೆದುಹಾಕಿ ಎಂದು ಟ್ವಿಟರ್‌ ಗೆ ಕೇಂದ್ರ ಸೂಚನೆ: ವರದಿ

Update: 2021-05-21 13:47 GMT

ಹೊಸದಿಲ್ಲಿ: ಕೇಂದ್ರ ಸರಕಾರ ಮತ್ತು ನರೇಂದ್ರ ಮೋದಿಯವರನ್ನು ಕೋವಿಡ್‌ ಪರಿಸ್ಥಿತಿಯ ಸಂದರ್ಭದಲ್ಲಿ ಅಪಮಾನಕ್ಕೀಡು ಮಾಡಲು ಕಾಂಗ್ರೆಸ್‌ ಪಕ್ಷವು ಟೂಲ್‌ ಕಿಟ್‌ ರಚಿಸಿತ್ತು ಎಂದು ಬಿಜೆಪಿ ಸದಸ್ಯರು ಆರೋಪಿಸಿದ್ದರಲ್ಲದೇ ಹಲವಾರು ಬಿಜೆಪಿ ಮುಖಂಡರು ಈ ಕುರಿತಾದಂತೆ ಪೋಸ್ಟ್‌ ಗಳನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದ್ದರು. ಬಳಿಕ ಇದೊಂದು ನಕಲಿ ಲೆಟರ್‌ ಹೆಡ್‌ ಬಳಸಿ ಮಾಡಲಾಗಿದ್ದ ಕೃತ್ಯ ಎಂದು ತಿಳಿದು ಬಂದಿತ್ತು. ಈ ಪೋಸ್ಟ್‌ ಹಾಕಿದ ಬಿಜೆಪಿ ಮುಖಂಡರೆಲ್ಲರ ಪೋಸ್ಟ್‌ ಗೆ ʼತಿರುಚಲ್ಪಟ್ಟ ಸುದ್ದಿ(ಮ್ಯಾನಿಪ್ಯುಲೇಟೆಡ್‌ ಮೀಡಿಯಾ) ಎಂಬ ಎಚ್ಚರಿಕೆಯನ್ನು ಟ್ವಿಟರ್‌ ಲಗತ್ತಿಸಿತ್ತು.

ಈ ಕುರಿತಾದಂತೆ ಇಂದು ಟ್ವಿಟರ್‌ ನಾದ್ಯಂತ ವ್ಯಾಪಕ ಸುದ್ದಿಯಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಪೋಸ್ಟ್‌ ಗಳಲ್ಲಿನ ತಿರುಚಲ್ಪಟ್ಟ ಸುದ್ದಿ ಎಂಬ ಲೇಬಲ್‌ ಅನ್ನು ತೆರವುಗೊಳಿಸುವಂತೆ ಕೇಂದ್ರ ಸರಕಾರವು ಟ್ವಿಟರ್‌ ಗೆ ಸೂಚನೆ ನೀಡಿದೆ ಎಂದು ndtv.com ವರದಿ ಮಾಡಿದೆ. ಈ ಕುರಿತಾದಂತೆ ಟ್ವಿಟರ್‌ ಪ್ರತಿಕ್ರಿಯೆಯ ಬಗ್ಗೆ ಕಾದು ನೋಡಬೇಕಾಗಿದೆ.

ಇಲೆಕ್ಟ್ರಾನಿಕ್ಸ್‌ ಮತ್ತು ಐಟಿ ಸಚಿವಾಲಯವು ಟ್ವಿಟರ್‌ ಜಾಗತಿಕ ತಂಡದೊಂದಿಗೆ ನಡೆಸಿದ ಸಂವಹನದಲ್ಲಿ, ರಾಜಕೀಯ ನಾಯಕರ ಟ್ವೀಟ್‌ ಗಳಿಗೆ ತಿರುಚಲ್ಪಟ್ಟ ಸುದ್ದಿ ಎಂಬ ಟ್ಯಾಗ್‌ ಬಳಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ ಎನ್ನಲಾಗಿದೆ. ಈ ಟೂಲ್‌ ಕಿಟ್ ಕೋವಿಡ್‌ ೧೯‌ ಅನ್ನು ನಿರ್ಮೂಲನೆಗೊಳಿಸುವಲ್ಲಿ ಸರಕಾರ ನಡೆಸುತ್ತಿರುವ ಪ್ರಯತ್ನಗಳನ್ನು ಅವಮಾನಿಸಲಾಗುತ್ತಿದೆ" ಎಂದು ಅದು ಹೇಳಿದ್ದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News