ಉಡುಪಿ; ಕೋವಿಡ್ ಸೋಂಕಿತ ಕಟ್ಟಡ ಕಾರ್ಮಿಕರ ಮಾಹಿತಿ ನೀಡಲು ಸೂಚನೆ
ಉಡುಪಿ, ಮೇ 21: ಕೋವಿಡ್-19ರ 2ನೇ ಅಲೆಯನ್ನು ತಡೆಗಟ್ಟಲು ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ, ಹಲವಾರು ಕಾರ್ಮಿಕರು ಕೊರೋನ ಕಾಯಿಲೆಗೆ ತುತ್ತಾಗಿರುವುದು ತಿಳಿದುಬಂದಿದೆ. ಇಂಥಹ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಾಹಿತಿಯನ್ನು ಸಲ್ಲಿಸುವಂತೆ ಬೆಂಗಳೂರಿನ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸೂಚಿಸಿದೆ.
ಆದ್ದರಿಂದ ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಒಳಗಾಗಿರುವ ಎಲ್ಲಾ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಈ ಕೆಳಗಿನ ನಮೂನೆಯಲ್ಲಿ ಮಾಹಿತಿಯನ್ನು ತಮ್ಮ ತಾಲೂಕುಗಳಿಗೆ ಸಂಬಂಧಿಸಿದ ಆಯಾ ತಾಲೂಕು ಕಾರ್ಮಿಕ ನಿರೀಕ್ಷಕರ ಕಚೇರಿಗೆ ಮೇ 29ರೊಳಗೆ ಇಮೇಲ್ ಮೂಲಕ ಅಥವಾ ವಾಟ್ಸ್‌ಅಪ್ ಮೂಲಕ ಸಲ್ಲಿಸುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಥಮ ಡೋಸ್ ಲಸಿಕೆ ಪಡೆದವರು: ಕೊರೋನ ಸೋಂಕನ್ನು ತಡೆಗಟ್ಟಲು ಸರಕಾರ ಕೈಗೊಂಡ ಕ್ರಮಗಳಲ್ಲಿ ಕೋವಿಡ್‌ಗೆ ಪ್ರತಿರೋದಕವಾಗಿ ಲಸಿಕೆಯನ್ನು ಪಡೆದುಕೊಳ್ಳುವುದು ಅವಶ್ಯವಾಗಿದ್ದು, ಉಡುಪಿ ಜಿಲ್ಲೆಯಲ್ಲೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾದ ಕಟ್ಟಡ ಕಾರ್ಮಿಕರು ಸಹ ಲಸಿಕೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸೂಚಿಸಿದೆ.
ಜಿಲ್ಲೆಯಲ್ಲಿ ಈಗಾಗಲೇ ಮೊದಲನೇ ಬಾರಿ ಲಸಿಕೆ ಪಡೆದ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ತಮ್ಮ ಹೆಸರು, ನೊಂದಣಿ ಸಂಖ್ಯೆ, ಲಸಿಕೆ ಪಡೆದ ದಿನಾಂಕ, ಲಸಿಕೆಯ ಹೆಸರು ಮತ್ತು ಎರಡನೇ ಬಾರಿ ಲಸಿಕೆ ಪಡೆಯಬೇಕಾದ ಅಂದಾಜು ದಿನಾಂಕದ ಮಾಹಿತಿಗಳನ್ನು ತಮ್ಮ ತಾಲೂಕುಗಳಿಗೆ ಸಂಬಂಧಿಸಿದಂತೆ ಆಯಾ ತಾಲೂಕು ಕಾರ್ಮಿಕ ನಿರೀಕ್ಷಕರ ಕಛೇರಿಗೆ ಮೇ 29ರೊಳಗೆ ಇಮೇಲ್ ಅಥವಾ ವಾಟ್ಸ್‌ಅಪ್ ಮೂಲಕ ಸಲ್ಲಿಸುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ತಿಳಿಸಿದ್ದಾರೆ.
ಉಡುಪಿ ತಾಲೂಕು: ಕಾರ್ಮಿಕ ನಿರೀಕ್ಷಕರು ಒಂದನೇ ವೃತ್ತ ಉಡುಪಿ, ಇ-ಮೇಲ್:liudupi1@gmail.com-ದೂರವಾಣಿ ಸಂಖ್ಯೆ: 8762434921. ಬ್ರಹ್ಮಾವರ ತಾಲೂಕುliudupi2@gmail.com : ಕಾರ್ಮಿಕ ನಿರೀಕ್ಷಕರು 2ನೇ ವೃತ್ತ ಉಡುಪಿ, ಇಮೇಲ್: -ದೂರವಾಣಿ: 9036660366. ಕಾಪು ತಾಲೂಕು: ಕಾರ್ಮಿಕ ನಿರೀಕ್ಷಕರು liudupi1@gmail.com 1ನೇ ವೃತ್ತ, ಉಡುಪಿ. ಇಮೇಲ್: -ದೂರವಾಣಿ: 8762434921. ಕಾರ್ಕಳ ತಾಲೂಕು : ಕಾರ್ಮಿಕ ನಿರೀಕ್ಷಕರು ಕಾರ್ಕಳ ವೃತ್ತ, ಕಾರ್ಕಳ. ಇಮೇಲ್: likarkala@gmail.com -ದೂರವಾಣಿ: 9632099949. ಹೆಬ್ರಿ ತಾಲೂಕು: likarkala@gmail.com ಕಾರ್ಮಿಕ ನಿರೀಕ್ಷಕರು, ಕಾರ್ಕಳ ವೃತ್ತ, ಕಾರ್ಕಳ. ಇಮೇಲ್: -ದೂರವಾಣಿ: 9632099949. ಕುಂದಾಪುರ ತಾಲೂಕು likundapura@gmail.com: ಕಾರ್ಮಿಕ ನಿರೀಕ್ಷಕರು, ಕುಂದಾಪುರ ವೃತ್ತ, ಕುಂದಾಪುರ. ಇಮೇಲ್: -ದೂರವಾಣಿ: 8151838722. ಬೈಂದೂರು ತಾಲೂಕು: ಕಾರ್ಮಿಕ ನಿರೀಕ್ಷಕರು, ಕುಂದಾಪುರ ವೃತ್ತ, ಕುಂದಾಪುರ. ಇಮೇಲ್:likundapura@gmail.com-ದೂರವಾಣಿ: 8151838722.