ಪಾದೂರು ಕಚ್ಚಾ ತೈಲ ಘಟಕ ಖಾಸಗೀಕರಣಗೊಳಿಸಿದರೆ ಹೋರಾಟದ ಎಚ್ಚರಿಕೆ
ಉಡುಪಿ, ಮೇ 21: ಪಾದೂರು ಕಚ್ಚಾ ತೈಲ ಸಂಗ್ರಹಣಾ ಘಟಕವನ್ನು ಸರಕಾರ ಖಾಸಗೀಕರಣಗೊಳಿಸಲು ಮುಂದಾಗಿದ್ದು, ಇದರಿಂದ ಉಡುಪಿ ಜಿಲ್ಲೆಗೆ ಬಹಳಷ್ಟು ಸಮಸ್ಯೆಯಾಗುವ ಸಾದ್ಯತೆ ಹೆಚ್ಚಾಗಿದೆ. ಆದುದರಿಂದ ಈ ಘಟಕವನ್ನು ಸರಕಾರ ಖಾಸಗೀಕರಣಗೊಳಿಸಿದರೆ ದೇಶದ ಹಿತ ಕ್ಕಾಗಿ ಬೀದಿ ಹೋರಾಟ ಅನಿವಾರ್ಯವಾಗುತ್ತದೆಂದು ಸಾಲಿಡಾರಿಟಿ ಯೂತ್ ಮೂಮೆಂಟ್ ಜಿಲ್ಲಾ ಸಂಚಾಲ ಯಾಸೀನ್ ಕೋಡಿಬೆಂಗ್ರೆ ತಿಳಿಸಿದ್ದಾರೆ.
ದೇಶದ ಅಂತರಿಕ ಭದ್ರತೆ ಮತ್ತು ಆಪತ್ ಕಾಲದಲ್ಲಿ ಸಹಾಯವಾಗಲೆಂದು ಪಾದೂರು, ಹೇರೂರು ಮತ್ತು ಮಜೂರಿನ ಜನ ನೂರಾರು ಎಕರೆ ಕೃಷಿ ಭೂಮಿ ಯನ್ನು ಕಿಂಚಿತ್ತು ಮೌಲ್ಯಕ್ಕೆ ಸರಕಾರಕ್ಕೆ ಬಿಟ್ಟುಕೊಟ್ಟಿದ್ದರು. ಇದೀಗ ಸರಕಾರ ದುರ್ಬಳಕೆ ಮಾಡಲು ಹೊರಟಂತಿದ್ದು ಘಟಕವನ್ನು ಖಾಸಗೀಕರಣ ಮಾಡಿ ಜನರ ವಿಶ್ವಾಸಕ್ಕೆ ದ್ರೋಹ ಎಸಗಲು ಮುಂದಾಗಿದೆ. ಐಎಸ್‌ಪಿಆರ್‌ಎಲ್ ಘಟಕದ ಆರಂಭಿಕ ಹಂತದಲ್ಲೇ ತೈಲ ಸೋರಿಕೆಯಾದ ಪರಿಣಾಮ ಸ್ಥಳೀಯರು ಸಾಕಷ್ಟು ಸಮಸ್ಯೆ ಅನುಭವಿಸಿದ್ದರು, ಇನ್ನು ಈ ಘಟಕ ಖಾಸಗೀಕರಣವಾದರೆ ಮತ್ತಷ್ಟು ಸಮಸ್ಯೆ ಗಳನ್ನು ಸ್ಥಳೀಯರು ಅನುಭವಿಸಬೇಕಾುತ್ತದೆ ಎಂದು ಅವರು ಹೇಳಿದರು.
ಈಗಾಗಲೇ ಈ ಘಟಕದ ಎರಡನೇ ಹಂತದ ಕಾಮಗಾರಿಗೆ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದು ಜನ ವಿರೋಧ ಕೂಡ ವಿದೆ. ಇದರ ಮಧ್ಯೆ ಖಾಸಗೀಕರಣಕ್ಕೆ ಕೈ ಹಾಕಿದರೆ ಜನರ ಮೂಲಭೂತ ಹಕ್ಕಿನ ಮೇಲೆ ಸರಕಾರ ಪ್ರಹಾರ ನಡೆಸಿದಂತಾಗುತ್ತದೆ ಎಂದು ಅವರು ದೂರಿದ್ದಾರೆ.
ಸರಕಾರ ಈ ಕೂಡಲೇ ತನ್ನ ತೀರ್ಮಾನದಿಂದ ಹಿಂಜರಿಯಬೇಕು. ಅದರೊಂದಿಗೆ ಈಗಾಗಲೇ ಸಮಸ್ಯೆ ಎದುರಿಸುತ್ತಿರುವ ಸ್ಥಳೀಯರಿಗೆ ಸೂಕ್ತ ವಾಗಿ ಸ್ಪಂದಿಸಬೇಕು. ಸ್ವಾಧೀನ ಪಡಿಸಿಕೊಂಡ ಭೂಮಿಗೆ ಸೂಕ್ತ ಮೌಲ್ಯವನ್ನು ನೀಡಬೇಕು. ಘಟಕದಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗವ ಕಾಶ ಕಲ್ಪಿಸಬೇಕು ಎಂದು ಅವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.