×
Ad

ಮೌಲಾನಾ ಆಝಾದ್ ಶಾಲೆಗೆ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ

Update: 2021-05-21 20:10 IST

ಉಡುಪಿ, ಮೇ 21: ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಉಡುಪಿ ಜಿಲ್ಲೆಯ ಕಾಪು ಮಲ್ಲಾರು ಹಾಗೂ ಕಾರ್ಕಳದ ಸಾಲ್ಮರ ದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೌಲಾನಾ ಆಝಾದ್ ಮಾದರಿ ಶಾಲೆ (ಆಂಗ್ಲ ಮಾಧ್ಯಮ)ಯ 6ನೇ, 7ನೇ ಹಾಗೂ 8ನೇ ತರಗತಿ ಗಳ ಪ್ರವೇಶಕ್ಕೆ ಅಲ್ಪಸಂಖ್ಯಾತರ ಸಮುದಾಯದವರಿಂದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ) ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಶಾಲೆಯಲ್ಲಿ ಅಲ್ಪಸಂಖ್ಯಾತರ ಸಮುದಾಯದವರಿಗೆ ಶೇ.75ರಷ್ಟು ಸ್ಥಾನ ಮತ್ತು ಇತರೆ ಶೇ.25 ಸ್ಥಾನಗಳು ಹಾಗೂ ಪ್ರತಿ ತರಗತಿಯಲ್ಲಿ ಹೆಣ್ಣು ಮಕ್ಕಳಿಗೆ ಶೇ.50ರಷ್ಟು ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಪ್ರತಿ ತರಗತಿ 60 ವಿದ್ಯಾರ್ಥಿ ಸಂಖ್ಯಾಬಲ ಹೊಂದಿರುತ್ತದೆ. ಇದು ವಸತಿ ರಹಿತ ಶಾಲೆಯಾಗಿದೆ. ವಿದ್ಯಾರ್ಥಿ ಗಳ ಪೋಷಕರ ಆದಾಯ ಮಿತಿ ಒಂದು ಲಕ್ಷ ರೂ.ಇದ್ದು, ಅಂಗವಿಕಲ, ಅನಾಥ, ಪೌರಕಾರ್ಮಿಕರ ಮಕ್ಕಳಿಗೆ ಮೀಸಲಾತಿ ಇರುತ್ತದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಮೌಲಾನಾ ಆಝಾದ್ ಭವನ, ಪಶು ಚಿಕಿತ್ಸಾಲಯದ ಹತ್ತಿರ, ಅಲೆ ವೂರು ರಸ್ತೆ, ಮಣಿಪಾಲ, ಉಡುಪಿ ತಾಲೂಕು-576104. ದೂರವಾಣಿ ಸಂಖ್ಯೆ: 0820- 2574596. ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ತಾಲೂಕು ಕಂದಾಯ ನೌಕರರ ಕಟ್ಟಡ, ಹಳೆತಹಶೀಲ್ದಾರರ ಕಛೇರಿ ಹಿಂಭಾಗ, ಹೊಸ ಬಸ್‌ಸ್ಟಾಂಡ್, ಕುಂದಾಪುರ, ಕುಂದಾಪುರ ತಾಲೂಕು-576201. ದೂರವಾಣಿ: 08254- 230370. ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ನೆಲಮಹಡಿ, ಮಿನಿ ವಿಧಾನಸೌಧ, ತಾಲೂಕು ಕಚೇರಿ ಕಂಪೌಂಡ್, ಕಾರ್ಕಳ, ಕಾರ್ಕಳ ತಾಲೂಕು -574104, ದೂರವಾಣಿ: 08258-231101 ಇವರನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News