×
Ad

ಕೊರೋನ ಲಸಿಕಾ ಅಭಿಯಾನ: ಸರಕಾರಕ್ಕೆ ಸಾಥ್ ನೀಡಲು ಸೇವಾ ಸಂಸ್ಥೆಗಳ ಸಂಕಲ್ಪ

Update: 2021-05-21 20:13 IST

ಮಂಗಳೂರು, ಮೇ 21: ಕೋವಿಡ್ ನಿಯಂತ್ರಣ, ನಿರ್ವಹಣೆ ಮತ್ತು ನಿರ್ಮೂಲನೆಯ ಕಾರ್ಯಾಚರಣೆಯಲ್ಲಿ ಸರಕಾರಕ್ಕೆ ಸಾಥ್ ನೀಡಲು ದ.ಕ.ಜಿಲ್ಲೆಯ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಸಂಕಲ್ಪ ಮಾಡಿವೆ.

ದ.ಕ.ಜಿಪಂ ಸಿಇಒ ಡಾ. ಕುಮಾರ್‌ರ ಅಧ್ಯಕ್ಷತೆಯಲ್ಲಿ, ಉಪಕಾರ್ಯದರ್ಶಿ ಹಾಗೂ ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿ ಕೆ. ಆನಂದ್ ಕುಮಾರ್‌ರ ನೇತೃತ್ವದಲ್ಲಿ ಎನ್‌ಜಿಒ ಜನ ಶಿಕ್ಷಣ ಟ್ರಸ್ಟ್ ಸಹಯೋಗದೊಂದಿಗೆ ಕೊರೊನ ಲಸಿಕಾ ಅಭಿಯಾನದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರದ ಕುರಿತು ಜಿಲ್ಲೆಯ ಆಯ್ದ ಎನ್‌ಜಿಒಗಳ ಅನ್‌ಲೈನ್ ಸಭೆಯನ್ನು ಶುಕ್ರವಾರ ನಡೆಸಲಾಯಿತು.

ಕೋವಿಡ್ ನಿಯಂತ್ರಣ ಮತ್ತು ನಿರ್ವಹಣಾ ಕಾರ್ಯದಲ್ಲಿ ಜಿಲ್ಲೆಯ ಸರಕಾರೇತರ ಸಂಸ್ಥೆಗಳು ಈಗಾಗಲೇ ಮಾಡುತ್ತಿರುವ ಮಹತ್ತರ ಕಾರ್ಯಗಳನ್ನು ಶ್ಲಾಘಿಸಿದ ಜಿಪಂ ಸಿಇಒ ಕೋರೊನ ಕೇರ್ ಸೆಂಟರ್‌ಗಳ ಸಮರ್ಪಕ ನಿರ್ವಹಣೆ ಮತ್ತು ಅಸುರಕ್ಷಿತ ವರ್ಗದ ಎಲ್ಲಾ ಅರ್ಹ ಫಲಾನುಭವಿಗಳನ್ನು ಲಸಿಕೆಗಾಗಿ ನೋಂದಾಯಿಸಲು ಗ್ರಾಪಂ ಮತ್ತು ಕಾರ್ಯಪಡೆಗಳೊಂದಿಗೆ ಕೈ ಜೋಡಿಸಬೇಕು ಎಂದರು.

ಕೊರೋನ ಲಸಿಕಾ ಅಭಿಯಾನದ ಜಿಲ್ಲಾ ನೋಡಲ್ ಅಧಿಕಾರಿ ಕೆ. ಆನಂದ ಕುಮಾರ್, ನೋಡಲ್ ಸಂಸ್ಥೆ ಜನಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಹಾಗೂ ಮಾಜಿ ಒಂಬುಡ್ಸಮನ್ ಶೀನ ಶೆಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲೇಸ್ವಾಮಿ ಮಾತಿ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್, ನಿಟ್ಟೆ ಸ್ಪೆಷಲ್ ಚೈಲ್ಡ್ ಕೇರ್ ಸೆಂಟರ್‌ನ ಡಾ. ಅಮರಶ್ರೀ, ಪ್ರಜ್ಞಾ ಕೌನ್ಸಿಲಿಂಗ್‌ನ ಪ್ರೊ.ಹಿಲ್ಡಾ ರಾಯಪ್ಪನ್, ದಿಶಾ ಟ್ರಸ್ಟ್‌ನ ಐರಿನ್ ವೇಗಸ್, ಪಡಿ ಸಂಸ್ಥೆಯ ರೆನ್ನಿ ಡಿಸೋಜ, ಸಂಸಾರ ತಂಡದ ಮೌನೇಶ್ ವಿಶ್ವಕರ್ಮ, ಇಂಚರದ ಪ್ರೀತಮ್ ತಮ್ಮ ಸಂಸ್ಥೆಗಳ ವತಿಯಿಂದ ಕೊರೋನ ತಡೆಗೆ ಮಾಡುತ್ತಿರುವ ಜಾಗೃತಿ ಕಾರ್ಯಗಳು, ನೀಡುತ್ತಿರುವ ಬೆಂಬಲ, ಸೇವೆಗಳು ಮತ್ತು ಲಸಿಕಾ ಅಭಿಯಾನದ ಯಶಸ್ವಿ ನಿರ್ವಹಣೆಗೆ ರೂಪಿಸಿಕೊಂಡಿರುವ ಕಾರ್ಯಯೋಜನೆಗಳ ಕುರಿತು ಮಾಹಿತಿ ನೀಡಿದರು.

ಕೃಷ್ಣ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಂಯೋಜಕ ಪ್ರಸನ್ನ ಕುಮಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News