ತನ್ನ ಬೆಂಬಲವನ್ನು ಭಾರತ ʼಬಹಿರಂಗವಾಗಿ ತೋರ್ಪಡಿಸಿಲ್ಲʼ: ಇಸ್ರೇಲ್‌ ಭಾರತೀಯ ರಾಯಭಾರಿ

Update: 2021-05-21 15:15 GMT

ಹೊಸದಿಲ್ಲಿ: ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ನ ಹಮಾಸ್‌ ನಡುವೆ ಘೋಷಿಸಲಾದ ಕದನ ವಿರಾಮವನ್ನು ಭಾರತೀಯ ಇಸ್ರೇಲ್‌ ರಾಯಭಾರ ಕಚೇರಿಯ ಉಪ ಮುಖ್ಯಸ್ಥೆ ರೋನಿ ಯೆಡಿಡಿಯಾ ಕ್ಲೈನ್‌ ಶ್ಲಾಘಿಸಿದ್ದಾರೆ. ಅಮೆರಿಕಾದಂತೆ ಹಲವು ರಾಷ್ಟ್ರಗಳು ಇಸ್ರೇಲ್‌ ಗೆ ಸಾರ್ವಜನಿಕವಾಗಿ ಬೆಂಬಲ ಸೂಚಿಸಿದರೂ, ಭಾರತವು ಅದನ್ನು ಅಭಿವವ್ಯಕ್ತಿಗೊಳಿಸಿಲ್ಲವಷ್ಟೇ ಎಂದು ಇಸ್ರೇಲ್‌ ನಂಬಿದ್ದಾಗಿ ಅವರು ಹೇಳಿಕೆ ನೀಡಿದ್ದಾರೆ.

"ನಾವು ಹಮಾಸ್‌ ನ ಹಲವು ಮುಖ್ಯ ಪ್ರದೇಶಗಳ ಮೇಲೆ ದಾಳಿ ನಡೆಸಿದ್ದೇವೆ ಎಂಬ ತೃಪ್ತಿ ನಮಗಿದೆ. ಇಸ್ರೇಲ್‌ ಗೆ ದಾಳಿ ನಡೆಸುವ ಅವರ ಸಾಮರ್ಥ್ಯವನ್ನು ಇಲ್ಲವಾಗಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಅವರ ಹಲವು ಮೂಲ ಸೌಕರ್ಯಗಳು ತೀವ್ರವಾಗಿ ಹಾನಿಗೀಡಾಗಿದೆ. ನಮ್ಮಲ್ಲಿ ಹಲವಾರು ಗುರಿಗಳಿದ್ದು, ಅವುಗಳಿಗೆಲ್ಲಾ ಸೈನ್ಯವು ಯಶಸ್ವಿಯಾಗಿ ದಾಳಿ ನಡೆಸಿದೆ. ಭಾರತವು ನಮ್ಮ ಸ್ಥಿತಿಗಳನ್ನು ಅರ್ಥೈಸಿಕೊಂಡಿದೆ. ಆದರೆ ಬಹಿರಂಗ ಬೆಂಬಲ ನೀಡಿಲ್ಲವೆಂದು ನಾವು ಭಾವಿಸುತ್ತೇವೆ" ಎಂದು ಅವರು ವರ್ಚುವಲ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದರು.

ಕದನ ವಿರಾಮದ ಕುರಿತು ಮಾತನಾಡಿದ ಅವರು, "ಹಮಾಸ್‌ ನಿಂದ ಇಸ್ರೇಲ್‌ ಕಡೆಗೆ ಯಾವುದೇ ದಾಳಿಯಾಗುವುದಿಲ್ಲ ಎಂದು ನಾವು ನಂಬುತ್ತೇವೆ. ಇಲ್ಲಿಯವರೆಗೆ ಶಾಂತಿ ಕಾಪಾಡಲಾಗಿದೆ. ಮುಂದ್ಕೆ ಹಮಾಸ್‌ ನಿಂದ ಗುಂಡಿನ ದಾಳಿ ನಡೆಯುವುದಿಲ್ಲ ಎಂದು ನಾವು ಭಾವಿಸುತ್ತೇವೆ. ಹಮಾಸ್‌ ನ ರಾಖೆಟ್‌ ಗಳು ಹಲವು ಇಸ್ರೇಲಿಗರನ್ನು ಕೊಂದಿದೆ. ಅದು ಜಗತ್ತಿಗೆ ತಿಳಿದಿದೆ" ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News