×
Ad

ಉಡುಪಿ ಜಿಲ್ಲೆಯ ಇಬ್ಬರಲ್ಲಿ ಕಪ್ಪು ಶಿಲೀಂದ್ರ ಸೋಂಕು ಪತ್ತೆ : ಆರೋಗ್ಯ ಇಲಾಖೆ

Update: 2021-05-21 21:22 IST

ಉಡುಪಿ, ಮೇ 21: ಕೋವಿಡ್‌ಗೆ ಪಾಸಿಟಿವ್ ಬಂದು, ಮಧುಮೇಹ ಕಾಯಿಲೆ ಇರುವವರಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಕಪ್ಪು ಶಿಲೀಂದ್ರ (ಮ್ಯೂಕರ್ ಮೈಕೋಸಿಸ್) ಸೋಂಕು ಜಿಲ್ಲೆಯ ಇಬ್ಬರು ರೋಗಿಗಳಲ್ಲಿ ಕಂಡುಬಂದಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಸಂತೆಕಟ್ಟೆಯ 60 ವರ್ಷ ಪ್ರಾಯದ ಮಹಿಳೆ ಹಾಗೂ ಕಾಪು ತಾಲೂಕು ನಂದಿಕೂರಿನ 45 ವರ್ಷದ ಪುರುಷರೊಬ್ಬರಿಗೆ ಸೋಂಕು ತಗಲಿದೆ. ಇಬ್ಬರಿಗೂ ಉಡುಪಿ ನಗರದ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಮಹಿಳೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಬ್ಲಾಕ್ ಫಂಗಸ್ ಸೋಂಕು ಉಡುಪಿ ಜಿಲ್ಲೆಯವರಲ್ಲಿ ಕಂಡುಬರುತ್ತಿರುವುದು ಇದೇ ಮೊದಲ ಸಲವಾಗಿದೆ. ಈ ಮುನ್ನ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಹೊರಜಿಲ್ಲೆಗಳಿಂದ ಬಂದ ಏಳು ಮಂದಿ ಕಪ್ಪು ಶಿಲೀಂದ್ರ ಸೋಂಕಿಗೆ ಚಿಕಿತ್ಸೆಯಲ್ಲಿದ್ದು, ಎಲ್ಲರೂ ಚಿಕಿತ್ಸೆಗೆ ಸ್ಪಂದಿಸುತಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News