ಉಪ್ಪಿನಂಗಡಿ : ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡಕ್ಕೆ ರಕ್ಷಣಾ ಸಲಕರಣೆ ಹಸ್ತಾಂತರ
Update: 2021-05-21 22:51 IST
ಉಪ್ಪಿನಂಗಡಿ : ನೆರೆ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡಕ್ಕೆ ರಕ್ಷಣಾ ಸಲಕರಣೆಗಳನ್ನು ಹಸ್ತಾಂತರಿಸಲಾಯಿತು.
ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡ ಹಾಗೂ ಹನೀಫಿ ಉಲೇಮಾ ಒಕ್ಕೂಟದ ವತಿಯಿಂದ ನೀಡಲಾದ ಈ ಎಲ್ಲಾ ಸಲಕರಣೆಗಳನ್ನು ಸ್ಥಳೀಯ ಮುಂದಾಳು ಇಸ್ಮಾಯಿಲ್ ತಂಙಳ್ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಜುಮ್ಮಾ ಮಸೀದಿಯ ಪದಾಧಿಕಾರಿಗಳಾದ ಶುಕೂರ್ ಹಾಜಿ, ಮುಸ್ತಾಫ ಯು., ಸಿದ್ದೀಕ್ ಕೆಂಪಿ, ಇಸುಬು ಪೆದಮಲೆ, ಫಯಾಝ್, ಯು.ಟಿ. ಇರ್ಷಾದ್, ಅಬ್ದುಲ್ ರಶೀದ್ ಉಪಸ್ಥಿತರಿದ್ದರು.
ಪ್ರಾಕೃತಿಕ ವಿಕೋಪದ ಯಾವುದೇ ಸಂದರ್ಭದಲ್ಲಿ ಸಹಾಯಕ್ಕೆ ಮುಂದಾಗುವ ಈ ತಂಡದಲ್ಲಿ 10 ಜನ ಈಜುಗಾರರನ್ನು ಹೊಂದಿದ್ದು, ಯಾವುದೇ ಶುಲ್ಕವಿಲ್ಲದೆ ಸೇವಾ ಮನೋಭಾವದೊಂದಿಗೆ ತೊಡಗಿಸಿಕೊಳ್ಳಲಿದ್ದಾರೆ ಎಂದು ಇಸ್ಮಾಯಿಲ್ ತಂಙಳ್ ತಿಳಿಸಿದರು.