ಸೂಕಿ ಪಕ್ಷದ ಮಾನ್ಯತೆ ರದ್ದು : ಮ್ಯಾನ್ಮಾರ್ ಚುನಾವಣಾ ಆಯೋಗದ ನಿರ್ಧಾರ

Update: 2021-05-21 17:32 GMT
photo: twitter (@2021SaveMyanmar)

 ಮ್ಯಾನ್ಮಾರ್,ಮೇ 21: ಆಂಗ್ ಸಾನ್ ಸೂಕಿ ಅವರ ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಾಸಿ ಪಾರ್ಟಿ (ಎನ್ ಎಲ್ ಅಡಿ)ಯನ್ನು ವಿಸರ್ಜಿಸಲಾಗುವುದೆಂದು ಮ್ಯಾನ್ಮಾರ್ ನ ಸೇನಾಡಳಿತ (ಜುಂಟಾ) ನೇಮಿತ ಚುನಾವಣಾ ಆಯೋಗವು ಶುಕ್ರವಾರ ಪ್ರಕಟಿಸಿದೆ. 

ನವೆಂಬರ್ ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸೂಕಿ ನೇತೃತ್ವದ ಎನ್ಎಲ್ಡಿ ಪಕ್ಷವು ವಂಚನೆ ಎಸಗಿರುವ ಹಿನ್ನೆಲೆಯಲ್ಲಿ ಅದರ ಮಾನ್ಯತೆಯನ್ನು ರದ್ದುಪಡಿಸಲು ನಿರ್ಧರಿಸಲಾಗಿದೆಯೆಂದು ಚುನಾವಣಾ ಆಯುಕ್ತರ ಹೇಳಿಕೆಯನ್ನು ಉಲ್ಲೇಖಿಸಿ ಮ್ಯಾನ್ಮಾರ್ ನ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಇಂದು ಆಯೋಗವು ನಡೆಸಿದ್ದ ರಾಜಕೀಯ ಪಕ್ಷಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆಯೆಂದು ಮ್ಯಾನ್ಮಾರ್ ನೌ ಸುದ್ದಿಸಂಸ್ಥೆ ತಿಳಿಸಿದೆ. ಆದರೆ ಈ ಸಭೆಯನ್ನು ಎನ್ ಎಲ್ ಡಿ ಸೇರಿದಂತೆ ಬಹುತೇಕ ರಾಜಕೀಯ ಪಕ್ಷಗಳು ಬಹಿಷ್ಕರಿಸಿದ್ದವು.
 ಚುನಾವಣೆಯಲ್ಲಿ ಎನ್ಎಲ್ಡಿ ಕಾನೂನುಬಾಹಿರವಾಗಿ ಚುನಾವಣಾ ವಂಚನೆಯನ್ನು ಎಸಗಿದೆ. ಹೀಗಾಗಿ ನಾವು ಪಕ್ಷದ ನೋಂದಣಿಯನ್ನು ರದ್ದುಪಡಿಸಬೇಕಾಗಿದೆ ಎಂದು ಚುನಾವಣಾ ಆಯೋಗದ ಮುಖ್ಯಸ್ಥ ತೈನ್ ಸೂ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News