ಬ್ರಿಟನ್: ಭಾರತೀಯ ಪ್ರಭೇದದ ವೈರಸ್ ಸೋಂಕಿನ ಪ್ರಕರಣಗಳಲ್ಲಿ ಏರಿಕೆ

Update: 2021-05-21 17:36 GMT

 ಲಂಡನ್,ಮೇ 21: ಬ್ರಿಟನ್ನಲ್ಲಿ ಪತ್ತೆಯಾಗಿರುವ ಭಾರತೀಯ ಪ್ರಭೇದದ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆಯು ಎರಡನೆ ವಾರದಲ್ಲಿ ದುಪ್ಪಟ್ಟು ಹೆಚ್ಚಿದೆ ಯೆಂದು ಬ್ರಿಟಿಷ್ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

 ನೂತನ ರೂಪಾಂತರಿತ ವೈರಸ್ ವೇಗವಾಗಿ ಹರಡುವ ಭೀತಿಯ ಹಿನ್ನೆಲೆಯಲ್ಲಿ ದೇಶದಲ್ಲಿ ಮತ್ತೆ ಸಂಪೂರ್ಣ ಲಾಕ್ಡೌನ್ ಘೋಷಿಸುವ ಸಾಧ್ಯತೆಯಿದೆಯೆನ್ನಲಾಗಿದೆ.
ಬ್ರಿಟನ್ನಲ್ಲಿ ಭಾರತೀಯ ಪ್ರಭೇದದ ಕೊರೋನ ವೈರಸ್ ಪತ್ತೆಯಾಗುತ್ತಿರುವುದು ತನಗೆ ಆತಂಕವುಂಟು ಮಾಡಿದೆಯೆಂದು ಪ್ರಧಾನಿ ಬೋರಿಸ್ ಜಾನ್ಸನ್ ತಿಳಿಸಿದ್ದಾರೆ.
  
ಕೊರೋನ ವೈರಸ್‌ ನ ಭಾರತೀಯ ಪ್ರಭೇದ ಬಿ1.617.2 ಸೋಂಕಿನ 3424 ಪ್ರಕರಣಗಳನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆ ಹೆಚ್ಚಿದ್ದಾರೆ. ಈ ಪ್ರಭೇದದ ಕೋರನ ವೈರಸ್ಗೆ ವಿಓಸಿ-21ಎಪಿಆರ್-02 ಎಂದೂ ಕೂಡಾ ಕರೆಯಲಾಗುತ್ತಿದೆ. ಕಳೆದ ವಾರ ಈ ಪ್ರಭೇದದ ಕೋರೊನ ವೈರಸ್‌ ಸೋಂಕಿನ 1313 ಪ್ರಕರಣಗಳು ದಾಖಲಾಗಿದ್ದವು. ಅದಕ್ಕೂ ಹಿಂದಿನ ವಾರ 520 ಪ್ರಕರಣಗಳು ಬೆಳಕಿಗೆ ಬಂದಿದ್ದವು.
  
ಭಾರತೀಯ ಪ್ರಭೇದದ ಕೊರೋನ ವೈರಸ್ ಬ್ರಿಟನ್ನಲ್ಲಿ ಹರಡುತ್ತಿರುವ ಬಗ್ಗೆ ತಾನು ಆಂತಕಿತನಾಗಿದ್ದೇನೆ ಎಂದು ಬ್ರಿಟಿಶ್ ಪ್ರಧಾನಿ ಬೋರಿಸ್ ಜಾನ್ಸನ್ ತಿಳಿಸಿದ್ದಾರೆ. ದೇಶದಲ್ಲಿ ಹೇರಲಾಗಿರುವ ಲಾಕ್ಡೌನ್ ಅನ್ನು ಜೂನ್ 21ರಂದು ಸಂಪೂರ್ಣವಾಗಿ ತೆಗೆದುಹಾಕುವ ಸರಕಾರದ ಯೋಜನೆಯ ಮೇಲೆ ಪರಿಣಾಮ ಬೀರಲಿದೆಯೆಂದು ಅವರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News