ಮಂಗಳೂರು : ಜೂಜಾಟ ಆರೋಪದಲ್ಲಿ 11 ಮಂದಿ ಸೆರೆ
Update: 2021-05-21 23:41 IST
ಮಂಗಳೂರು : ಬಿಕರ್ನಕಟ್ಟೆಯ ಬಾಡಿಗೆ ಮನೆಯೊಂದರಲ್ಲಿ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ಅಕ್ರಮ ಜೂಜಾಟವಾದ ಆಂದರ್- ಬಾಹರ್ ಆಟ ಆಡುತ್ತಿದ್ದ ಆರೋಪದಲ್ಲಿ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ರಾಜೇಂದ್ರ ಹಲ್ದಾರ್(41), ಕನಕಪ್ಪ ಕೋಟಿ(40), ರಾಘವೇಂದ್ರ(24), ಉಮೇಶ ರಾಮಪ್ಪ ಚೌಡಪ್ಪ,(24), ಲಕ್ಷ್ಮಪ್ಪ (37), ರೋಹನ್ (24), ಲಕ್ಕಪ್ಪ, ಹನುಮಪ್ಪ ವಾಲಿಕಾರ್(26), ಬಾಸ್ಕರ (54) ಚಿದಾನಂದ (25), ಶಿವಲಿಂಗಪ್ಪ(30) ಎಂದು ಪೊಲೀಸರು ತಿಳಿಸಿದ್ದು, ಬಂಧಿತರಿಂದ ಬಾಹರ್ ಜೂಜಾಟಕ್ಕೆ ಬಳಸಿದ 90.000 ರೂ. ನಗದು, ಮೊಬೈಲ್ ಫೋನುಗಳು ಹಾಗು ಇತರ ಸೊತ್ತುಗಳನ್ನು ವಶಪಡಿಸಿ ಕೊಳ್ಳಲಾಗಿದ್ದು, ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.