ಜೋಕಟ್ಟೆಯ ಹುಮಿನಿಟಿ ಗ್ರೂಪ್ ವತಿಯಿಂದ ನಿರಾಶ್ರಿತರಿಗೆ ಊಟ ವಿತರಣೆ
Update: 2021-05-22 12:41 IST
ಮಂಗಳೂರು : ಜೋಕಟ್ಟೆಯ ಹುಮಿನಿಟಿ ಗ್ರೂಪ್ ಇದರ ವತಿಯಿಂದ ಲಾಕ್ ಡೌನ್ ನಿಂದಾಗಿ ಸಂಕಷ್ಟ ಒಳಗಾಗಿರುವ ವಲಸೆ ಕಾರ್ಮಿಕರು, ನಿರಾಶ್ರಿತರು ಹಾಗೂ ಲಾರಿ ಚಾಲಕರಿಗೆ ಕಳೆದ ಒಂದು ವಾರದಿಂದ ಮಧ್ಯಾಹ್ನದ ಊಟ ಜೋಕಟ್ಟೆ ಪರಿಸರದಲ್ಲಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಹಾಜಿ ಮೊಹಮ್ಮದ್ ಸಿರಾಜ್ ಮನೆಗಾರ್, ತಾಲೂಕು ಪಂಚಾಯತ್ ಸದಸ್ಯರಾದ ಬಿ. ಎಸ್. ಬಶೀರ್ ಅಹಮದ್, ಅಸ್ಗರ್, ರವೂಫ್ ನಡುಮನೆ, ಮೊಹಮ್ಮದ್ ರಶೀದ್ ಬಾವಾಜಿ, ಎಮ್. ಎಚ್ ರಶೀದ್ ಕೊಪ್ಪ, ಆಸೀಫ್ ಯುನಿಕ್ , ಬಿ. ಎ. ಮೊಹಮ್ಮದ್ ಅನೀಸ್, ನವಾಝ್ ಎಚ್.ಪಿ.ಸಿ.ಎಲ್, ಸಮದ್ ಕೆ. ಬಿ. ಎಸ್. ನಝೀರ್ ನಿಶಾ ಡೈನ್, ಮೊಹಮ್ಮದ್ ಹನೀಫ್, ರವೂಫ್ ಸಿಟಿ ಫ್ಯಾಶನ್, ಫಾರೂಕ್ ಸಿ.ಎ, ಬದ್ರುದ್ದೀನ್ ನೀರ್ಪರಿ ಹಾಗೂ ಮತ್ತಿತರರು ಬಾಗವಹಿಸಿದ್ದರು.