×
Ad

ಗಂಡಿಬಾಗಿಲು ಮಸೀದಿ ಮಾಜಿ ಅಧ್ಯಕ್ಷ ಯೂಸುಫ್ ಹಾಜಿ ನಿಧನ

Update: 2021-05-22 16:02 IST

ಉಪ್ಪಿನಂಗಡಿ: ಕೊಯಿಲ ಗ್ರಾಮದ ಗಂಡಿಬಾಗಿಲು ನಿವಾಸಿ, ಮುಖ್ರಿ ಫ್ಯಾಮಿಲಿ ಹಿರಿಯ ಸದಸ್ಯ ಯೂಸುಫ್ ಹಾಜಿ ಗಂಡಿಬಾಗಿಲು (88) ಕೆಲ ದಿನಗಳ ಅನಾರೋಗ್ಯದಿಂದ ಶನಿವಾರ ತನ್ನ ಮನೆಯಲ್ಲಿ ನಿಧನ ಹೊಂದಿದರು.

ಗಂಡಿಬಾಗಿಲು ಹಿಮಾಯತ್ತುಲ್ ಇಸ್ಲಾಂ ಮದ್ರಸ ಸ್ಥಾಪಕರಾಗಿ, ಅಧ್ಯಕ್ಷರಾಗಿ, ಮಸೀದಿ ಸಮಿತಿಯ ಖಜಾಂಚಿಯಾಗಿಯೂ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಇವರು ಇತರೇ ಹಲವಾರು ಧಾರ್ಮಿಕ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು. ಅದಾಗ್ಯೂ ಶಿಕ್ಷಣ ಪ್ರೇಮಿಯೂ ಆಗಿದ್ದ ಇವರು 1995ರಲ್ಲಿ ಗಂಡಿಬಾಗಿಲುಗೆ ಪ್ರಾಥಮಿಕ ಶಾಲೆ ಮಂಜೂರಾತಿ ಆದಾಗ ಶಾಲೆಗೆ ಕಟ್ಟಡ ಇಲ್ಲದ ಸಂದರ್ಭದಲ್ಲಿ ತನ್ನ ಕಟ್ಟಡದಲ್ಲಿ ಶಾಲೆ ಆರಂಭಿಸಲು ಅನುಮತಿ ನೀಡಿ ತನ್ನ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದ್ದರು.

ಮೃತರು ಪುತ್ರರು, ಪುತ್ರಿಯರು ಹಾಗು ಬಂಧುಬಳಗವನ್ನು ಅಗಲಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News