ಪ್ರಧಾನಿ ಮೋದಿ ಕಣ್ಣೀರಿನ ಕುರಿತು ನ್ಯೂಯಾರ್ಕ್‌ ಟೈಮ್ಸ್‌ ಮುಖಪುಟ ವರದಿ: ಸತ್ಯಾಂಶವೇನು?

Update: 2021-05-22 14:28 GMT

ಹೊಸದಿಲ್ಲಿ: ಶುಕ್ರವಾರದಂದು ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯ ಆರೋಗ್ಯ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವ ವೇಳೆ ಕೋವಿಡ್‌ ನಿಂದ ಮೃತರಾದವರ ಕುಟುಂಬದ ಕುರಿತು ಮಾತನಾಡುತ್ತಾ ಭಾವುಕರಾಗಿದ್ದರು. ಈ ಕುರಿತಾದಂತೆ ಹಲವಾರು ಮಂದಿ ಸಾಮಾಜಿಕ ತಾಣದಾದ್ಯಂತ ವ್ಯಂಗ್ಯವಾಡಿದ್ದರು. ಇದೀಗ ಪ್ರಧಾನಿ ಮೋದಿ ಮೊಸಳೆ ಕಣ್ಣೀರು ಹರಿಸಿದ್ದಾರೆಂದು ನ್ಯೂಯಾರ್ಕ್‌ ಟೈಮ್ಸ್‌ ಅಂತಾರಾಷ್ಟ್ರೀಯ ಆವೃತ್ತಿಯ ಮುಖಪುಟದಲ್ಲಿ ವರದಿ ಪ್ರಕಟಿಸಿದೆ ಎಂಬ ಚಿತ್ರವೊಂದು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ.

ಎಡಿಟ್‌ ಮಾಡಲಾದ ಚಿತ್ರ

ದಿ ನ್ಯೂಯಾರ್ಕ್‌ ಟೈಮ್ಸ್‌  ಪತ್ರಿಕೆಯ ಅಂತಾರಾಷ್ಟ್ರೀಯ ಆವೃತ್ತಿ ಮುಖಪುಟದಲ್ಲಿ ಮೊಸಳೆ ಕಣ್ಣೀರು ಹಾಕುತ್ತಿರುವ ಫೋಟೊದ ಮೇಲ್ಗಡೆ ಭಾರತದ ಪ್ರಧಾನ ಮಂತ್ರಿ ಅತ್ತಿದ್ದಾರೆ ಎಂಬ ವಾಕ್ಯವನ್ನು ಸೇರಿಸಲಾಗಿದೆ. ಈ ಕುರಿತಾದಂತೆ ʼವಾರ್ತಾಭಾರತಿʼ ನ್ಯೂಯಾರ್ಕ್‌ ಟೈಮ್ಸ್‌  ಪತ್ರಿಕೆಯ ವೆಬ್‌ ಸೈಟ್‌ ನಲ್ಲಿ ಶನಿವಾರದ ಸಂಚಿಕೆಯನ್ನು ಪರಿಶೀಲಿಸಿದಾಗ ಇದೊಂದು ಎಡಿಟೆಡ್‌ ಫೋಟೊ ಆಗಿದ್ದು, ಇಂತಹಾ ಯಾವುದೇ ವರದಿಯನ್ನೂ ನ್ಯೂಯಾರ್ಕ್‌ ಟೈಮ್ಸ್ ಪ್ರಕಟಿಸಿಲ್ಲ ಎಂದು ತಿಳಿದು ಬಂದಿದೆ.

ಆದರೆ ಕೋಲ್ಕತ್ತದಿಂದ ಪ್ರಕಟವಾಗುವ ʼದಿ ಟೆಲಿಗ್ರಾಫ್‌ʼ ಇಂಗ್ಲಿಷ್‌ ದೈನಿಕ ತನ್ನ ಮುಖಪುಟದಲ್ಲಿ ಈ ಕುರಿತಾದಂತೆ ವಿಡಂಬನಾತ್ಮಕ ವರದಿ ಪ್ರಕಟಿಸಿದೆ. ಮುಖಪುಟದಲ್ಲಿ ಮೊಸಳೆಯ ಚಿತ್ರವನ್ನು ಪ್ರಕಟಿಸಿ, ಬಡ ಮೊಸಳೆಗಳನ್ನು ದಯವಿಟ್ಟು ದೂರಿದಿರಿ. ಅವರು ಆಹಾರ ಸೇವಿಸುವ ವೇಳೆ ಕಣ್ಣೀರು ಹಾಕುತ್ತದೆಯೇ ಹೊರತು  ದುಃಖದಲ್ಲಿದ್ದಾಗ ಅಲ್ಲ" ಎಂದು ಪ್ರಕಟಿಸಿದೆ.

ಶುಕ್ರವಾರದಂದು ಪ್ರಧಾನಿ ನರೇಂದ್ರ ಮೋದಿಯವರು ಭಾವುಕರಾಗಿ ಭಾಷಣ ಮಾಡಿದ ಬಳಿಕ ದೇಶಾದ್ಯಂತ ಟ್ವಿಟರ್‌ ನಲ್ಲಿ #crocodiletears (ಮೊಸಳೆ ಕಣ್ಣೀರು) ಟ್ರೆಂಡಿಂಗ್‌ ಆಗಿತ್ತು. 

ʼದಿ ಟೆಲಿಗ್ರಾಫ್‌ʼ ಪ್ರಕಟಿಸಿದ ವರದಿ

ಶನಿವಾರದ ನ್ಯೂಯಾರ್ಕ್‌ ಟೈಮ್ಸ್‌ ನ ನೈಜ ಮುಖಪುಟದ ಚಿತ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News