×
Ad

ಲಸಿಕೆಗಾಗಿ ರಿಕ್ಷಾ, ಟ್ಯಾಕ್ಸಿ ಚಾಲಕರಿಂದ ಅರ್ಜಿ

Update: 2021-05-22 20:04 IST

ಉಡುಪಿ, ಮೇ 22: ರಾಜ್ಯ ಸರಕಾರ ಆಟೋ ರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರನ್ನು ಕೊರೋನಾ ಮುಂಚೂಣಿ ಕಾರ್ಮಿಕರೆಂದು ಪರಿಗಣಿಸಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 20- 44ವರ್ಷ ವಯಸ್ಸಿನ ಚಾಲಕರಿಗೆ ಕೊರೋನಾ ಲಸಿಕೆ ನೀಡಲಾಗುವುದು ಎಂದು ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.

ಆದುದರಿಂದ ಚಾಲಕರು ತಮ್ಮ ಯೂನಿಯನ್ ಮೂಲಕ/ಖುದ್ದಾಗಿ ಡಿಎಲ್, ಆಧಾರ್, ಭಾವಚಿತ್ರ ಗಳೊಂದಿಗೆ ಅರ್ಜಿಗಳನ್ನು ಉಡುಪಿ ಪ್ರಾದೇಶಿಕ ಸಾರಿಗೆ ಕಛೇರಿಗೆ ತುರ್ತಾಗಿ ಸಲ್ಲಿಸಬೇಕು. ಈ ಆಧ್ಯತಾ ಅರ್ಹತಾ ಪ್ರಮಾಣಪತ್ರ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಪಡೆದು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಬೇಕಾ ಗಿದ್ದು, ತತ್ಸಂಬಂಧ ಸವಿವರ ಮಾಹಿತಿಯನ್ನು ಕಚೇರಿಯಿಂದ ಪಡೆಯಬಹು ದಾಗಿದೆ. ಕೊರೋನ ಲಸಿಕೆಯನ್ನು ಅತೀ ಶೀಘ್ರವಾಗಿ ಹಾಕಿಸಿಕೊಳ್ಳಲು ಚಾಲಕರು ಈ ಪ್ರಯೋಜನವನ್ನು ಪಡೆದುಕೊಳ್ಳಲೇಬೇಕೆಂದು ಅವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News