×
Ad

ಬಿಪಿಎಲ್ ಕಾರ್ಡ್‌ಗಳ ರದ್ಧತಿ ಜನ ವಿರೋಧಿ: ಮೊಯಿದಿನಬ್ಬ

Update: 2021-05-22 20:15 IST

ಉಡುಪಿ, ಮೇ 22: ರಾಜ್ಯದಲ್ಲಿ ಕಠಿಣ ಲಾಕ್‌ಡೌನ್ ಜಾರಿಗೊಂಡು ಮಧ್ಯಮ ವರ್ಗದ ಹಾಗೂ ಬಡ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿರುವ ಈ ಸಮಯದಲ್ಲಿ ಆದಾಯ ತೆರಿಗೆ ಇಲಾಖೆ ನೆಪದಲ್ಲಿ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಿರುವ ಆಹಾರ ಇಲಾಖೆಯ ಕ್ರಮವು ಜನ ವಿರೋಧಿಯಾಗಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ.ಮೊಯಿದಿನಬ್ಬ ತಿಳಿಸಿದ್ದಾರೆ.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಮಾಹಿತಿಯಂತೆ ಉಡುಪಿ ಜಿಲ್ಲೆಯಲ್ಲಿ ಸುಮಾರು 2671ರಷ್ಟು ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿಗಳು ಎಪಿಎಲ್ ಆಗಿ ಪರಿವರ್ತನೆಯಾಗಿದ್ದು, ಕೆಲವೊಂದು ಸಂದರ್ಭಗಳಲ್ಲಿ ಬಿಪಿಎಲ್ ಪಡಿತರಕ್ಕೆ ಅರ್ಹರಾದ ಮಧ್ಯಮ ವರ್ಗದ ಕುಟುಂಬಗಳು ಶೈಕ್ಷಣಿಕ ಸಾಲ ಪಡೆಯಲು ಮತ್ತು ಗೃಹ ನಿರ್ಮಾಣಕ್ಕೆ ಸಾಲ ಪಡೆಯುವ ಉದ್ದೇಶಕ್ಕೆ ಬ್ಯಾಂಕ್ ಅವರ ಸೂಚನೆಯಂತೆ ತಮ್ಮ ಆದಾಯ ಮಿತಿಗಿಂತ ಹೆಚ್ಚು ಆದಾಯ ನಮೂದಿಸಿರುವ ಪ್ರಕರಣಗಳೇ ಅಧಿಕವಾಗಿದ್ದು ಅದನ್ನೇ ನೆಪವಾಗಿಟ್ಟುಕೊಂಡು ಆಹಾರ ಇಲಾಖೆ ಪಡಿತರ ಚೀಟಿಯನ್ನು ಬದಲಾಯಿಸುವುದು ಮಾನವೀಯತೆ ಅಲ್ಲ ಎಂದು ಅವರು ಹೇಳಿಕೆಯಲ್ಲಿ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News