ಪರಿಹಾರ ಪ್ಯಾಕೇಜ್‌ನಲ್ಲಿ ಮೀನುಗಾರರಿಗೆ ಮಹಾದ್ರೋಹ: ರಮೇಶ್ ಕಾಂಚನ್
ಉಡುಪಿ, ಮೇ 22: ರಾಜ್ಯ ಬಿಜೆಪಿ ಸರಕಾರ ಘೋಷಣೆ ಮಾಡಿದ ಕೋವಿಡ್ ಪರಿಹಾರ ಪ್ಯಾಕೇಜ್‌ನಲ್ಲಿ ಮೀನುಗಾರರನ್ನು ಪರಿಗಣಿಸದಿರುವುದು ಅವರಿಗೆ ಮಾಡಿದ ಮಹಾದ್ರೋಹ ಎಂದು ನಗರಸಭಾ ಪ್ರತಿಪಕ್ಷದ ನಾಯಕ ರಮೇಶ್ ಕಾಂಚನ್ ಆರೋಪಿಸಿದ್ದಾರೆ.
ಕೋವಿಡ್ ಎರಡನೇ ಅಲೆ ಬಂದು ಲಾಕ್ ಡೌನ್ ಘೋಷಣೆ ಮಾಡಿರುವ ರಾಜ್ಯ ಬಿಜೆಪಿ ಸರಕಾರ ಪ್ರತಿ ಭಾರಿ ಕರಾವಳಿ ಭಾಗದಲ್ಲಿ ಮೀನುಗಾರ ರನ್ನು ಚುನಾವಣೆಯಲ್ಲಿ ತನ್ನ ಮತ ಬ್ಯಾಂಕ್ ನಂತೆ ಬಳಸಿ ಇವತ್ತಿನ ಕೋರೋನ ಅತಿ ಸಂಕಷ್ಟದ ಸಮಯದಲ್ಲಿ ಮರೆತುಬಿಟ್ಟಿರುವುದು ಅಕ್ಷಮ್ಯ ಅಪರಾಧವಗಿದೆ ಎಂದು ಅವರು ದೂರಿದ್ದಾರೆ.
ಕರಾವಳಿ ಭಾಗದ ಮೂರೂ ಸಂಸದರು ಬಿಜೆಪಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಅವಳಿ ಜಿಲ್ಲೆಯಲ್ಲಿ 13ರಲ್ಲಿ 12 ಬಿಜೆಪಿ ಶಾಸಕರನ್ನು ಗೆಲ್ಲಿಸು ವಲ್ಲಿ ಮೀನುಗರಾರು ಪ್ರಮುಖ ಪಾತ್ರ ವಹಿಸಿರುತ್ತಾರೆ. ಆದರೂ ಇಂತಹ ಕಠಿಣ ಸಂದರ್ಭದಲ್ಲಿ ಇವರಿಗೆ ಸಹಾಯ ಮಾಡದೆ ಬಿಜೆಪಿ ಸರಕಾರ ಮಹಾದ್ರೋಹ ಎಸಗಿದೆ ಎಂದು ಅವರು ಆರೋಪಿಸಿದ್ದಾರೆ.
ಜಿಲ್ಲೆಯ ಜನಪ್ರತಿನಿಧಿನಗಳು ಈ ತಾರತಮ್ಯವನ್ನು ಪ್ರಶ್ನಿಸದೆ ವಿಷಯಾಂತಾರ ಮಾಡುತ್ತಿದ್ದು ಮುಂದಿನ ಚುನಾವಣೆಯಲ್ಲಿ ಜನರು ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.