×
Ad

ದ.ಕ.ಜಿಲ್ಲೆ : ಬ್ಲ್ಯಾಕ್ ಫಂಗಸ್ ಖಾಯಿಲೆ ಪೀಡಿತರ ಸಂಖ್ಯೆ 11ಕ್ಕೇರಿಕೆ

Update: 2021-05-22 22:09 IST

ಮಂಗಳೂರು, ಮೇ 22: ದ.ಕ.ಜಿಲ್ಲೆಯಲ್ಲಿ ಶನಿವಾರ ಕೊರೋನ ಸೋಂಕಿತ ಮೂರು ಮಂದಿಯಲ್ಲಿ ಬ್ಲ್ಯಾಕ್ ಫಂಗಸ್ ಖಾಯಿಲೆ ಪತ್ತೆಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಈ ಖಾಯಿಲೆ ಪೀಡಿತರ ಸಂಖ್ಯೆ 11ಕ್ಕೇರಿದೆ. ಇದಲ್ಲದೆ ಇನ್ನೂ ಮೂರು ಮಂದಿಯಲ್ಲಿ ಶಂಕಿತ ಬ್ಲ್ಯಾಕ್ ಫಂಗಸ್ ಕಂಡುಬಂದಿದೆ ಎಂದು ತಿಳಿದು ಬಂದಿದೆ.

ಶಂಕಿತರಲ್ಲಿ ಇಬ್ಬರು ವೆನ್ಲಾಕ್‌ನಲ್ಲಿದ್ದರೆ, ಇನ್ನೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಈ ಖಾಯಿಲೆಗೆ ಒಳಗಾದ ಮೂರು ಮಂದಿ ವಿವಿಧ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈವರೆಗೆ ಪತ್ತೆಯಾದ 11 ಮಂದಿಯಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಬ್ಲಾಕ್ ಫಂಗಸ್‌ನಿಂದ ಮೃತಪಟ್ಟವರು ಮತ್ತು ಖಾಯಿಲೆಗೆ ಒಳಗಾದವರೆ ಲ್ಲರೂ ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯವರು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ತಿಳಿಸಿದ್ದಾರೆ.

ಬ್ಲ್ಯಾಕ್ ಫಂಗಸ್‌ಗೆ ನೀಡುವ ಆ್ಯಂಟಿ ಫಂಗಲ್ ಇಂಜೆಕ್ಷನ್‌ಗೆ ಬೇಡಿಕೆ ಸಲ್ಲಿಸಲಾಗಿದೆ. ಆದರೆ ಸರಕಾರದಿಂದ ಇನ್ನೂ ಪೂರೈಕೆಯಾಗಿಲ್ಲ. ಆದರೆ ಖಾಸಗಿ ಆಸ್ಪತ್ರೆಗಳು ಆ್ಯಂಟಿ ಫಂಗಲ್‌ನ ಬೇರೆ ಬೇರೆ ಇಂಜೆಕ್ಷನ್‌ಗಳನ್ನು ತರಿಸಿಕೊಂಡು ಚಿಕಿತ್ಸೆ ನೀಡುತ್ತಿವೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News