ಉಡುಪಿ, ಕುಂದಾಪುರ ಸರಕಾರಿ ಆಸ್ಪತ್ರೆಗಳಲ್ಲಿ ಮಕ್ಕಳ ಐಸಿಯು: ಜಿಲ್ಲಾಧಿಕಾರಿ
Update: 2021-05-22 22:15 IST
ಉಡುಪಿ, ಮೇ 22: ಕೊರೋನ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿರುವ ಬಗ್ಗೆ ತಜ್ಞರ ವರದಿಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಕ್ಕಳಿಗಾಗಿ ಒಟ್ಟು 25 ಐಸಿಯು ಬೆಡ್‌ಗಳ ಪ್ರತ್ಯೇಕ ವ್ಯವಸ್ಥೆಯನ್ನು ಸ್ಥಾಪಿಸ ಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ನಿರ್ಮಿತಿ ಕೇಂದ್ರದ ಲಾಭಾಂಶದಲ್ಲಿ ಪ್ರತ್ಯೇಕವಾಗಿ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ 15 ಹಾಗೂ ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ 10 ಐಸಿಯು ಬೆಡ್‌ಗಳನ್ನು ನಿರ್ಮಿಸಲಾಗುವುದು. ಆ ಮೂಲಕ ಮೂರನೇ ಅಲೆಯನ್ನು ಎದುರಿಸಲು ಸಿದ್ಧತೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಆಸ್ಪತ್ರೆಗಳಲ್ಲಿ ಸದ್ಯ ಜಾಗದ ಸಮಸ್ಯೆ ಇದ್ದು, ಸರಿಯಾದ ಜಾಗ ಗುರುತಿಸುವಂತೆ ಸಂಬಂಧಪಟ್ಟವರು ಸೂಚನೆ ನೀಡಲಾಗಿದೆ. ಜಾಗ ಗುರುತಿ ಸಿದ ಕೂಡಲೇ ನಿರ್ಮಿತಿ ಕೇಂದ್ರದಿಂದ ಕೆಲಸ ಆರಂಭಿಸಲಾಗುವುದು. ಐಸಿಯು ಬೆಡ್, ವೆಂಟಿಲೇಟರ್‌ಗಳನ್ನು ಕೇಂದ್ರದ ಲಾಭಾಂಶದಿಂದ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.