​ಸ್ಥಳೀಯರಿಗೆ ಉದ್ಯೋಗ ನಿರಾಕರಣೆ: ಐವನ್ ಖಂಡನೆ

Update: 2021-05-23 12:17 GMT

ಮಂಗಳೂರು, ಮೇ 23: ಎಂಆರ್‌ಪಿಎಲ್ ಸ್ಥಾಪನೆಗೊಳ್ಳುವಾಗ ಶೇ.50ರಷ್ಟು ಸ್ಥಳೀಯರಿಗೆ ಮತ್ತು ಉಳಿದ ಶೇ.50ರಷ್ಟು ಕನ್ನಡಿಗರಿಗೆ ಉದ್ಯೋಗ ನೀಡಬೇಕು ಎಂಬ ಷರತ್ತನ್ನು ಸ್ಥಳೀಯರು ವಿಧಿಸಿದ್ದರೂ ಕೂಡ ಇದೀಗ ಸ್ಥಳೀಯರಿಗೆ ಮಾತ್ರವಲ್ಲ, ಕನ್ನಡಿಗರಿಗೂ ಉದ್ಯೋಗ ನೀಡದೆ ವಂಚಿಸ ಲಾಗಿದೆ. ಬಹುತೇಕ ಉದ್ಯೋಗವನ್ನು ಹೊರ ರಾಜ್ಯದವರಿಗೆ ನೀಡಿ ಅನ್ಯಾಯ ಎಸಗಿರುವ ಎಂಆರ್‌ಪಿಎಲ್ ಕಂಪೆನಿಗಳ ಮತ್ತು ಈ ಬಗ್ಗೆ ಮೌನ ತಾಳಿರುವ ಸ್ಥಳೀಯ ಸಂಸದರ, ಶಾಸಕರ ವರ್ತನೆಯನ್ನು ಎಐಸಿಸಿ ಕಾರ್ಯದರ್ಶಿ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಖಂಡಿಸಿದ್ದಾರೆ.

ಸ್ಥಳೀಯರ ತ್ಯಾಗದ ಫಲವಾಗಿ ಎಂಆರ್‌ಪಿಎಲ್ ಕಂಪೆನಿ ಆಸ್ತಿತ್ವಕ್ಕೆ ಬಂದಿದೆ. ಆದರೆ ಸಾವಿರಾರು ಕೋ.ರೂ. ಲಾಭಗಳಿಸುತ್ತಿರುವ ಈ ಕಂಪೆನಿಯು ತ್ಯಾಗ ಮಾಡಿದವರನ್ನು ಬಿಟ್ಟು ಹೊರಗಿನವರಿಗೆ ಮಣೆ ಹಾಕಿರುವುದು ಅಕ್ಷಮ್ಯ. ಕೂಡಲೇ ಸ್ಥಳೀಯರಿಗೆ ಉದ್ಯೋಗ ನೀಡದಿದ್ದಲ್ಲಿ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News