ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ 2023 ಕ್ಕೆ ಮುಂದೂಡಿಕೆ

Update: 2021-05-23 15:01 GMT
photo: twitter

ಹೊಸದಿಲ್ಲಿ: ಕೋವಿಡ್ -19 ಪರಿಸ್ಥಿತಿಯ ನಡುವೆ ನಿರಂತರವಾಗಿ ಬದಲಾವಣೆಗೆ ಒಳಪಟ್ಟಿರುವ ಕ್ರಿಕೆಟ್ ಕ್ಯಾಲೆಂಡರ್ ನಲ್ಲಿಬಿಡುವಿಲ್ಲದ  ವೇಳಾಪಟ್ಟಿಯಿಂದಾಗಿ  ಈ ವರ್ಷ ನಡೆಯಬೇಕಾಗಿದ್ದ ಏಶ್ಯಾಕಪ್ ಕ್ರಿಕೆಟ್ ಟೂರ್ನಿಯು  2023 ಕ್ಕೆ ಮುಂದೂಡಿಕೆಯಾಗಿದೆ.

 ಈ ವರ್ಷದ ಕಾಂಟಿನೆಂಟಲ್ ಪಂದ್ಯಾವಳಿಯನ್ನು ಪಾಕಿಸ್ತಾನದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಲಾಯಿತು.  ಆದರೆ ದ್ವೀಪ ರಾಷ್ಟ್ರದಲ್ಲಿ ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ ಟೂರ್ನಿಯನ್ನು  ರದ್ದುಪಡಿಸಲಾಯಿತು. ಏಷ್ಯಾದ ಎಲ್ಲ ಪ್ರಮುಖ ನಾಲ್ಕು ತಂಡಗಳು ವರ್ಷದ ಅಂತ್ಯದವರೆಗೆ ಬಿಡವಿಲ್ಲದೆ ಕ್ರಿಕೆಟ್ ಆಡುತ್ತಿರುವುದರಿಂದ  ಈ ವರ್ಷ ಪಂದ್ಯಾವಳಿಗಾಗಿ ದಿನಾಂಕ ಕಂಡುಹಿಡಿಯುವುದು ತುಂಬಾ ಕಷ್ಟಕರವಾಗಿತ್ತು ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಈ ನಿಟ್ಟಿನಲ್ಲಿ ಹೇಳಿಕೆ ನೀಡಿತು.

ಈ ವರ್ಷದ ಏಶ್ಯಕಪ್ ಪಂದ್ಯಾವಳಿಯು  ಅಕ್ಟೋಬರ್-ನವೆಂಬರ್ ನಲ್ಲಿ  ಭಾರತದಲ್ಲಿ ನಡೆಯಲಿರುವ ಟ್ವೆಂಟಿ- 20 ವಿಶ್ವಕಪ್ ಗೆ ಮೊದಲು ಟ್ವೆಂಟಿ-20 ಮಾದರಿಯಲ್ಲಿ ನಡೆಯಬೇಕಾಗಿತ್ತು.

2018 ರಿಂದ ಯಾವುದೇ ಏಷ್ಯಾ ಕಪ್ ನಡೆದಿಲ್ಲ, 2020 ಕ್ಕೆ ಯೋಜಿಸಲಾಗಿರುವ ಪಂದ್ಯಾವಳಿಯು ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲ್ಪಟ್ಟಿತ್ತು. ಪಂದ್ಯಾವಳಿಯ ಕೊನೆಯ ಎರಡು ಆವೃತ್ತಿಗಳನ್ನು ಭಾರತ ಗೆದ್ದಿದೆ. ಪಂದ್ಯಾವಳಿಯನ್ನು ಸಾಮಾನ್ಯವಾಗಿ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News