ಉಡುಪಿ ಜಿಲ್ಲೆಯ ಎಸೆಸೆಲ್ಸಿ ಮಕ್ಕಳಿಗೆ ನಿರಂತರ ಕಲಿಕೆ: ನಾಗೂರ
ಉಡುಪಿ, ಮೇ 23: ಕೋವಿಡ್ ಹಿನ್ನೆಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆಗಳನ್ನು ಮುಂದೂಡಲಾಗಿದ್ದರೂ ಜಿಲ್ಲೆಯಲ್ಲಿ ಎಸೆಸೆಲ್ಸಿ ಮಕ್ಕಳ ಕಲಿಕೆಯನ್ನು ಮುಂದು ವರೆಸಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದೇಶರ್ಕ ಎನ್.ಎಚ್. ನಾಗೂರ ತಿಳಿಸಿದ್ದಾರೆ.
ಜಿಲ್ಲೆಯ ಒಟ್ಟು 259 ಪ್ರೌಢ ಶಾಲೆಗಳಲ್ಲಿ 13329 ಮಕ್ಕಳು ರೆಗ್ಯೂಲರ್ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲು ನೊಂದಣಿ ಮಾಡಕೊಂಡಿ ದ್ದಾರೆ. ಒಟ್ಟು 51 ಪರೀಕ್ಷಾ ಕೇಂದ್ರಗಳನ್ನು ಮಾಡಲಾಗಿದೆ. ಈಗ ಲಾಕ್‌ಡೌನ್ ಅವಧಿಯಲ್ಲಿ ಶಾಲೆಗಳು ಬಂದ್ ಆಗಿರುವುದರಿಂದ ಮಕ್ಕಳು ತಮ್ಮ ಮನೆಗಳಲ್ಲಿ ದ್ದಾರೆ. ಅವರಿಗೆ ಪ್ರತಿ ಶಾಲೆಯಿಂದ ಶೈಕ್ಷಣಿಕ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಶಾಲಾವಾರು ವಿಷಯವಾರು ವಾಟ್ಸಾಪ್‌ಗ್ರೂಪ್‌ಗಳನ್ನು ರಚಿಸಲಾಗಿದೆ. ಆನ್‌ಲೈನ್ ಮೂಲಕ ಪುನರ್ಬಲನ ಮತ್ತು ಕಲಿಕಾ ಕೊರತೆ ಇರುವ ಪಾಠಗಳನ್ನು ಪುನರ್ ಬೋಧನೆ ಮಾಡಲಾಗುತ್ತಿದೆ. ಆನ್‌ಲೈನ್ ಮೂಲಕ ಪೂರ್ವ ಸಿದ್ದತಾ ಪರೀಕ್ಷೆಗಳನ್ನು ಶಾಲಾ ವಾರು ನಡೆಸಲಾಗುತ್ತಿದೆ. ಪ್ರತಿ ಎರಡು ದಿನಕ್ಕೆ ಒಂದು ದಿನ ವಿಷವಾರು ಗೂಗಲ್ ಮೀಟ್‌ಮಾಡಿ ಅವರ ಕಲಿಕಾ ಪ್ರಗತಿಯನ್ನು ಪರಿಶೀಲನೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಮೇ4ರಿಂದ ಪ್ರತಿ ವಿಷಯಕ್ಕೆ 12-15 ಸಂಪನ್ಮೂಲ ಶಿಕ್ಷಕರನ್ನು ಪಟ್ಟಿ ಮಾಡಿ ಅವರ ಪೊನ್ ನಂಬರುಗಳನ್ನು ಜಿಲ್ಲೆಯ ಎಲ್ಲ ಪ್ರೌಢ ಶಾಲೆಗಳ ಮೂಲಕ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಗೆ ನೀಡಲಾಗಿದೆ. ವಿದ್ಯಾರ್ಥಿಗಳು ತಮ್ಮ ಓದಿನ ಸಮಯದಲ್ಲಿ ವಿಷಯ ಶಿಕ್ಷಕರಿಗೆ ಪೋನ್ ಕರೆ ಮಾಡಿ ಕಲಿಕಾ ಸಮಸ್ಯೆ ಗಳನ್ನು ಪರಿಹರಿಸಿಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿಷಯವಾರು ರಸಪ್ರಶ್ನೆ ಕಾರ್ಯಕ್ರಮವನ್ನು ಆನ್‌ಲೈನ್ ಮೂಲಕ ಮಾಡ ಲಾಗುತ್ತಿದೆ. ಪ್ರತಿ ಶಾಲೆಯ ವಿಷಯ ಶಿಕ್ಷಕರು ತಮ್ಮ ಶಾಲೆಯ ಮಕ್ಕಳನ್ನು ದತ್ತು ಪಡೆದಿದ್ದಾರೆ. ಅವರ ಸಂಪೂರ್ಣ ಕಲಿಕೆಯನ್ನು ಕಲಿಕಾ ಪರಿಣಾಮವನ್ನು ಅವರಿಗೆ ಫೋನ್ ಮೂಲಕ ಮತ್ತು ಅವರು ಓದಿ ಬರೆದ ಅಂಶಗಳನ್ನು ವಾಟ್ಸಾಪ್‌ನಲ್ಲಿ ತರಿಸಿಕೊಂಡು ಪರಿಶೀಲನೆ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
2021-22ನೇ ಶೈಕ್ಷಣಿಕ ವರ್ಷಕ್ಕೆ 1ನೇ ತರಗತಿಯಿಂದ 10ನೇ ತರಗತಿಗಳಿಗೆ ಆನ್‌ಲೈನ್ ಮೂಲಕ ಕಲಿಕೆಯನ್ನು ಮಾಡುವ ವಿಧಾನವನ್ನು ವಿಷಯವಾರು ಆನ್‌ಲೈನ್ ವಿಧಾನದ ಬೋಧನೆಗೆ ಯಾವ ಯಾವ ಆನ್‌ಲೈನ್ ಚಟುವಟಿಕೆ ಗಳನ್ನು ಮಾಡಬೇಕು ಎಂಬುದನ್ನು ತಾಲೂಕುವಾರು ತರಗತಿಗಳನ್ನು ಹಂಚಿಕೆ ಮಾಡಿಕೊಡಲಾಗಿದೆ. 1-10ತರಗತಿಗಳ ಎಲ್ಲ ವಿಷಯಗಳನ್ನು ಆನ್‌ಲೈನ್ ಮೂಲಕ ಬೋಧನ ಮಾಡುವ ವಿಧಾನದ ಸಿದ್ಧತೆಯನ್ನು ಮಾಡಲು ಆದೇಶಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.