ಕದ್ರಿ ಅಗ್ನಿಶಾಮಕ ದಳದ 7 ಮಂದಿಗೆ ಕೊರೋನ ಸೋಂಕು
Update: 2021-05-23 22:18 IST
ಮಂಗಳೂರು, ಮೇ 23: ಕದ್ರಿ ಅಗ್ನಿಶಾಮಕ ಠಾಣೆಯ 7 ಮಂದಿ ಸಿಬ್ಬಂದಿಗೆ ಕೊರೋನ ಪಾಸಿಟಿವ್ ಆಗಿದೆ ಎಂದು ತಿಳಿದು ಬಂದಿದೆ.
ತೌಕ್ತೆ ಚಂಡಮಾರುತದ ಪರಿಣಾಮ ಸುರಿದ ಭಾರೀ ಮಳೆಯ ವೇಳೆ ಬಿಡುವಿಲ್ಲದೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡ ಸಂದರ್ಭ ಕೊರೋನ ಸೋಂಕಿಗೊಳಗಾಗಿರಬಹುದು ಎಂದು ಶಂಕಿಸಲಾಗಿದೆ.
ಪಾಸಿಟಿವ್ ದೃಢವಾಗುತ್ತಲೇ 7 ಮಂದಿಯನ್ನೂ ಕ್ವಾರಂಟೈನ್‌ಗೊಳಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.