"ಜನ ಏಳು ವರ್ಷದಿಂದ 15 ಲಕ್ಷ ರೂ.ಗೆ ಕಾಯುತ್ತಿದ್ದಾರೆ, ಸ್ವಲ್ಪ ನೀವೂ ಕಾಯಿರಿ"

Update: 2021-05-29 14:11 GMT

ಯಾಸ್‌ ಚಂಡಮಾರುತದ ಕುರಿತಾದಂತೆ ನಡೆದ ಭೇಟಿಯ ಸಂದರ್ಭ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿಯನ್ನು 30 ನಿಮಿಷಗಳ ಕಾಲ ಕಾಯುವಂತೆ ಮಾಡಿದ್ದಾರೆ ಎಂಬ ಕೇಂದ್ರ ಸರಕಾರದ ಆರೋಪಕ್ಕೆ ಟಿಎಂಸಿ  ಸಂಸದೆ ಮಹುಆ ಮೊಯಿತ್ರ ಟ್ವೀಟ್‌ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಜನ ಏಳು ವರ್ಷದಿಂದ 15 ಲಕ್ಷ ರೂ.ಗೆ ಕಾಯುತ್ತಿದ್ದಾರೆ, ಸ್ವಲ್ಪ ನೀವೂ ಕಾಯಿರಿ" ಎಂದು ಪ್ರಧಾನಿ ಮತ್ತು ಸರಕಾರವನ್ನು ಕುಟುಕಿದ್ದಾರೆ.

"30 ನಿಮಿಷ ಕಾಯಿಸಿದ್ದಾರೆ ಎನ್ನುವ ಆರೋಪದ ಕುರಿತಾದಂತೆ ತುಂಬಾ ಚರ್ಚೆಗಳು ನಡೆಯುತ್ತಿವೆ. ಭಾರತೀಯರು 15 ಲಕ್ಷ ರೂಪಾಯಿಗೆ 7 ವರ್ಷಗಳಿಂದ ಕಾಯುತ್ತಿದ್ದಾರೆ. ಎಟಿಎಮ್‌ ನ ಮುಂಭಾಗದಲ್ಲಿ ಗಂಟೆಗಟ್ಟಲೆ ಕಾದಿದ್ದಾರೆ. ಲಸಿಕೆ ಹಾಕಿಸಿಕೊಳ್ಳಲು ತಿಂಗಳುಗಟ್ಟಲೆ ಕಾಯುತ್ತಿದ್ದೇವೆ. ಈಗ ನೀವೂ ಕಾಯಿರಿ" ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಇದೇ ಪ್ರಕರಣದ ಕುರಿತಾದಂತೆ ಮಾತನಾಡಿದ್ದ ಮಮತಾ ಬ್ಯಾನರ್ಜಿ, "ನೀವು ನಿಮ್ಮ ಸೋಲಿನ ನಂತರವೂ ಅಹಂಕಾರವನ್ನು ಮುಂದುವರಿಸುತ್ತಿದ್ದೀರಿ. ನಿಮ್ಮ ರಾಜಕೀಯದಾಟವನ್ನು ನಿಲ್ಲಿಸಿ. ನಾನು ನಿಮ್ಮನ್ನು ಕಾಯಿಸಲಿಲ್ಲ. ನೀವೇ ನನ್ನನ್ನು 20ನಿಮಿಷ ಕಾಯುವಂತೆ ಮಾಡಿದ್ದೀರಿ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News