×
Ad

ತಹಶೀಲ್ದಾರ್ ರ್‍ರಿಂದ ಕಾರ್ಯಾಚರಣೆ: ಅಂಗಡಿ ಮಳಿಗೆಗಳಿಗೆ ದಂಡ

Update: 2021-05-29 22:23 IST

ಪಡುಬಿದ್ರಿ :  ಕಾಪು ತಹಶೀಲ್ದಾರ್ ಪ್ರತಿಭಾ ಆರ್. ಶನಿವಾರ ಹೆಜಮಾಡಿಯ ಚೆಕ್‍ಪೋಸ್ಟ್ ನಲ್ಲಿ ಕಾರ್ಯಾಚರಣೆ ನಡೆಸಿ ವಾಹನ ತಪಾಸಣೆ ನಡೆಸಿದರು.

ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿಗೆ ಸಂಚರಿಸುವ ಎಲ್ಲಾ ವಾಹನಗಳ ತಪಾಸಣೆಗೈದರು.  ವಾಹನಗಳ ಚಾಲಕರಿಂದ ಜಿಲ್ಲೆಗೆ ಆಗಮಿಸುವ ಉದ್ದೇಶ ಹಾಗೂ ಪ್ರತಿ ವಾಹನ ಗಳ ದಾಖಲೆಯನ್ನು ಪರಿಶೀಲಿಸಿದರು.  ಅನಗತ್ಯ ಸಂಚರಿಸುವ ವಾಹನ ಸವಾರರಿಗೆ ಎಚ್ಚರಿಕೆ ನೀಡಿದರು.

ಅಂಗಡಿ ಮಳಿಗೆಗಳ ಮೇಲೆ ದಾಳಿ: ಕೋವಿಡ್-19 ಉಲ್ಲಂಘನೆ ಸಂಬಂಧಿಸಿ ಹೆಜಮಾಡಿಯ ಕನ್ನಂಗಾರ್ ಮಸೀದಿ ಬಳಿಯ ವ್ಯಾಪಾರ ಮಳಿಗೆಗಳ ಮೇಲೆ ತಹಸೀಲ್ದಾರ್ ದಾಳಿ ನಡೆಸಿ ಅಂಗಡಿ ಮಾಲೀಕರಿಗೆ ದಂಡ ವಿಧಿಸಿದರು. ಈ ಬಗ್ಗೆ  ಗ್ರಾಮ ಪಂಚಾಯತ್ ಪಿಡಿಓ ಸುಮತಿಯವರು ಈಗಾಗಲೇ ಸೂಪರ್ ಮಾರುಕಟ್ಟೆಗೆ ನೋಟಿಸ್ ನೀಡಲಾಗಿದೆ ಎಂದರು.

ಮುಂದಿನ ದಿನದಲ್ಲಿ ಕೋವಿಡ್-19 ನಿಯಮ ಉಲ್ಲಂಘಿಸಿ ಸಮಯ ಮೀರಿ ವ್ಯಾಪಾರ ನಡೆಸಿದಲ್ಲಿ ಲಾಕ್ ಡೌನ್ ಮುಗಿಯುವವರೆಗೆ ಲೈಸೆನ್ಸ್ ರದ್ದು ಮಾಡುವಂತೆ ಗ್ರಾಮ ಪಂಚಾಯತಿಗೆ ತಹಶಿಲ್ದಾರ್ ಆದೇಶ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News