×
Ad

ಸುಳ್ಯ: ಕಳವು ಪ್ರಕರಣ; ಆರೋಪಿಗಳು ಸೆರೆ

Update: 2021-05-29 22:31 IST

ಸುಳ್ಯ: ಇತ್ತೀಚೆಗೆ ಸುಳ್ಯ ನಗರದ ಜ್ಯುವೆಲ್ಲರಿ ಅಂಗಡಿಯಿಂದ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬು ನಿವಾಸಿ ತಂಗಚ್ಚ ಯಾನೆ ಬಶೀರ್ (50) ಹಾಗು ತ್ರಿಶೂರು ಜಿಲ್ಲೆಯ ಅಂಬಳೂರು ನಿವಾಸಿ ಶಿಬು (48) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ಚಿನ್ನಾಭರಣ ಹಾಗು ಕೃತ್ಯಕ್ಕೆ ಬಳಸಿದ ಸೊತ್ತುಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದ.ಕ. ಜಿಲ್ಲಾ ಎಸ್ ಪಿ ರಿಷಿಕೇಶ್ ಭಗವಾನ್ ಸೋನಾವಾಲೆ ನೇತೃತ್ವದಲ್ಲಿ ಹೆಚ್ಚುವರಿ ಎಸ್ಪಿ ಭಾಸ್ಕರ , ಡಿವೈಎಸ್ಪಿ  ಹಾನಾ ಪಿ. ಕುಮಾರ್ ಮಾರ್ಗದರ್ಶನದಲ್ಲಿ ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ,  ಎಸ್ ಐ ಹರೀಶ್, ಅಪರಾಧ ವಿಭಾಗದ ಎಸ್ಐ ರತನ್ ಕುಮಾರ್ ತಂಡ ಮತ್ತು ಸಿಬ್ಬಂದಿ ಕಾರ್ಯಾಚರಣೆ ಯಲ್ಲಿ  ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News