ಐಪಿಎಲ್‌ನ ಉಳಿದ ಪಂದ್ಯಗಲನ್ನು ಯುಎಇನಲ್ಲಿ ನಡೆಸಲು ಬಿಸಿಸಿಐ ಅಸ್ತು

Update: 2021-05-30 04:50 GMT

ಮುಂಬೈ: ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಉಳಿದ ಪಂದ್ಯಗಳನ್ನು ಯುಎಇಯಲ್ಲಿ ಪೂರ್ಣಗೊಳಿಸಲು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರ್ಧರಿಸಿದೆ.

 ಐಪಿಎಲ್ 2021ರ ಉಳಿದ ಪಂದ್ಯಗಳು ಸೆಪ್ಟಂಬರ್ 18 ಮತ್ತು ಅಕ್ಟೋಬರ್ 10ರ ನಡುವೆ ಅಂದರೆ ಭಾರತದ ಇಂಗ್ಲೆಂಡ್ ಪ್ರವಾಸ ಮುಗಿದ ನಂತರ ಮತ್ತು ಟ್ವೆಂಟಿ-20 ಚಾಂಪಿಯನ್‌ಶಿಪ್ ಪ್ರಾರಂಭವಾಗುವ ಮೊದಲು ಆಯೋಜಿಸಲಾಗುವುದು.

 ಶನಿವಾರ ನಡೆದ ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಕುರಿತು ಚರ್ಚಿ ಸಲಾಯಿತು. ಐಪಿಎಲ್ ಹದಿಮೂರನೇ ಆವೃತ್ತಿಯ ಪಂದ್ಯಾವಳಿಯ ಆತಿಥ್ಯ ವಹಿಸಿದ್ದ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯೊಂದಿಗೆ 14ನೇ ಆವೃತ್ತಿಯ ಉಳಿದ ಪಂದ್ಯಗಳ ಬಗ್ಗೆ ಚರ್ಚಿಸಲು ಐಪಿಎಲ್ ಮಾಜಿ ಅಧ್ಯಕ್ಷ ರಾಜೀವ್ ಶುಕ್ಲಾ ದುಬೈಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

  ಐಸಿಸಿ ತೆರಿಗೆ ವಿನಾಯಿತಿ ಬಯಸಿದೆ. ಆದರೆ ನಾವು ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಆದರೆ ಭಾರತದಲ್ಲಿ ಟ್ವೆಂಟಿ-20 ವಿಶ್ವಕಪ್ ಎಂದರೆ ಎಲ್ಲಾ ಪಾಲುದಾರರು ಲಾಭ ಗಳಿಸುತ್ತಾರೆ. ಆದರೆ ಮೇ ತಿಂಗಳಲ್ಲಿ ಕುಳಿತು ಅಕ್ಟೋಬರ್‌ನ ದೇಶದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ. ಆದ್ದರಿಂದ ನಮಗೆ ಸ್ವಲ್ಪ ಸಮಯಬೇಕು ಎಂದು ಅಧಿಕಾರಿಯೊಬ್ಬರು ಹೇಳಿದರು.

 ಆದಾಯ ತಂದು ಕೊಡುವ ಐಪಿಎಲ್ ಮೇಲೆ ಬಿಸಿಸಿಐ ಗಮನ ಮುಂದುವರಿದಿದೆ. ಒಂದು ಗಂಟೆ ಅವಧಿಯ ವರ್ಚುವಲ್ ಸಭೆಯಲ್ಲಿ ದೇಶೀಯ ಕ್ರಿಕೆಟ್‌ನ ಬಗ್ಗೆ ಒಂದು ಮಾತನ್ನೂ ಚರ್ಚಿಸಲಾಗಿಲ್ಲ ಎಂದು ತಿಳಿದು ಬಂದಿದೆ.

ಬಿಸಿಸಿಐ ದೇಶೀಯ ಕ್ರಿಕೆಟಿಗರ ಬಗ್ಗೆ ಹೆಚ್ಚು ಕಾಳಜಿ ವಹಿಸದಿರುವುದು ವಿಷಾದಕರ. ಇದೀಗ ದೇಶೀಯ ಕ್ರಿಕೆಟ್ ಪುನರಾರಂಭಕ್ಕೆ ಪರಿಸ್ಥಿತಿ ಅನುಕೂಲಕರವಾಗಿಲ್ಲ. ಆದರೆ ಈ ವಿಚಾರದಲ್ಲಿ ಬಿಸಿಸಿಐ ಪದಾಧಿಕಾರಿಗಳು ಏನನ್ನೂ ಯೋಜಿಸಲು ಬಯಸುವುದಿಲ್ಲ ಎಂದು ಎಸ್‌ಜಿಎಂನಲ್ಲಿ ಪಾಲ್ಗೊಂಡ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News