×
Ad

ಧೂಮಪಾನಿಗಳು ಗಂಭೀರ ಕಾಯಿಲೆಗೆ ತುತ್ತಾಗುವ ಮತ್ತು ಕೋವಿಡ್‌ ನಿಂದ ಮೃತಪಡುವ ಸಾಧ್ಯತೆ 50% ಅಧಿಕ: ವಿಶ್ವ ಆರೋಗ್ಯ ಸಂಸ್ಥೆ

Update: 2021-05-30 14:23 IST

ನ್ಯೂಯಾರ್ಕ್: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ತಂಬಾಕು ಸೇವಿಸುವ‌ ಅಥವಾ ಧೂಮಪಾನ ಮಾಡುವ ಜನರು ಗಂಭೀರ ಕಾಯಿಲೆಗಳನ್ನು ಉಂಟುಮಾಡುವ ಮತ್ತು ಕೋವಿಡ್ -19 ನಿಂದ ಸಾಯುವ ಸಾಧ್ಯತೆಯ ಶೇಕಡಾ 50 ರಷ್ಟು ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆ ಎಂದು ಶುಕ್ರವಾರ ಎಚ್ಚರಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ 'ಕಮಿಟ್ ಟು ಕ್ವಿಟ್' ತಂಬಾಕು ಅಭಿಯಾನದ ಕುರಿತಾದಂತೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು, ಧೂಮಪಾನಿಗಳು ಕ್ಯಾನ್ಸರ್, ಹೃದ್ರೋಗಗಳು ಮತ್ತು ಉಸಿರಾಟದ ಕಾಯಿಲೆಗಳನ್ನೂ ಕೋರೋನಕ್ಕೆ ತುತ್ತಾದ ಸಂದರ್ಭದಲ್ಲಿ ಅಭಿವೃದ್ಧಿಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.

"ಧೂಮಪಾನಿಗಳಿಗೆ ಕೋವಿಡ್ -19 ನಿಂದ ತೀವ್ರವಾದ ಕಾಯಿಲೆ ಮತ್ತು ಸಾವು ಸಂಭವಿಸುವ ಶೇಕಡಾ 50 ರಷ್ಟು ಹೆಚ್ಚಿನ ಅಪಾಯವಿದೆ, ಆದ್ದರಿಂದ ಈ ಸಂದರ್ಭದಲ್ಲೇ ಧೂಮಪಾನವನ್ನು ತ್ಯಜಿಸುವುದು ಉತ್ತಮವಾಗಿದೆ. ಹಾಗಿದ್ದಲ್ಲಿ ಕೋವಿಡ್‌ 19 ಸೇರಿದಂತೆ ಕ್ಯಾನ್ಸರ್‌, ಶ್ವಾಸ ಕೋಶ ಸಮಸ್ಯೆಗಳು, ಹೃದ್ರೋಗಗಳು ನಮ್ಮನ್ನು ಆವರಿಸಿಕೊಳ್ಳುವುದರಿಂದ ತಪ್ಪಿಸಿಕೊಳ್ಳಬಹುದು" ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

"WHO ಅಭಿಯಾನಕ್ಕೆ ಸೇರ್ಪಡೆಗೊಳ್ಳುವ ಮೂಲಕ ಮತ್ತು ತಂಬಾಕು ಮುಕ್ತ ವಾತಾವರಣವನ್ನು ಸೃಷ್ಟಿಸುವ ಮೂಲಕ ಎಲ್ಲಾ ದೇಶಗಳು ತಮ್ಮ ಪಾತ್ರವನ್ನು ವಹಿಸಬೇಕೆಂದು ನಾವು ಒತ್ತಾಯಿಸುತ್ತೇವೆ, ಅದು ಜನರಿಗೆ ಧೂಮಪಾನ ತ್ಯಜಿಸಲು ಅಗತ್ಯವಾದ ಮಾಹಿತಿ, ಬೆಂಬಲ ಮತ್ತು ಸಾಧನಗಳನ್ನು ನೀಡುತ್ತದೆ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News