ರಾಜ್ಯ ದಾರಿಮಿ ಉಲಮಾ ಒಕ್ಕೂಟದಿಂದ ವಿಖಾಯ ಸೇವೆಗಾಗಿ ಪಿಪಿಇ ಕಿಟ್ ಕೊಡುಗೆ
Update: 2021-05-30 15:21 IST
ಮಂಗಳೂರು : ಕೋವಿಡ್ ಮಯ್ಯಿತ್ ಪರಿಪಾಲನೆ ವೇಳೆ ಧರಿಸಲು ಅನಿವಾರ್ಯ ವಾಗಿರುವ ಪಿಪಿಇ ಕಿಟ್ ನ ಕೊರತೆಯನ್ನು ನೀಗಿಸುವ ಸಲುವಾಗಿ ದಾರಿಮಿ ಉಲಮಾ ಒಕ್ಕೂಟವು ಮೊದಲ ಹಂತದ 250 ಕಿಟ್ ನ್ನು ನೀಡಲಾಯಿತು.
ಎಸ್ ಕೆ ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಅಮೀರ್ ತಂಙಳ್ ಅವರಿಗೆ ರಾಜ್ಯ ಉಲಮಾ ಕಾರ್ಯದರ್ಶಿ ಮೌಲಾನಾ ಯುಕೆ ಅಬ್ದುಲ್ ಅಝೀಝ್ ದಾರಿಮಿ ಕಿಟ್ ಹಸ್ತಾಂತರಿಸಿದರು.
ಜಿಲ್ಲಾ ಎಸ್ಕೆಎಸ್ಸೆಸ್ಸೆಪ್ ನಾಯಕರ ಕೋರಿಕೆ ಮೇರೆಗೆ ಪಿಪಿಇ ಕಿಟ್ ಒದಗಿಸಲು ರಾಜ್ಯ ಉಲಮಾ ಒಕ್ಕೂಟ ತೀರ್ಮಾನಿಸಿದ್ದು ಒಕ್ಕೂಟದ ಅಧ್ಯಕ್ಷ ಎಸ್ ಬಿ ದಾರಿಮಿಯವರ ನೇತೃತ್ವದಲ್ಲಿ ಒಮಾನ್ ದಾರಿಮಿ, ಕೆ ಎಸ್ ಹೈದರ್ ದಾರಿಮಿ, ತಬೂಕ್ ದಾರಿಮಿ , ಹುಸೈನ್ ದಾರಿಮಿ ಮೊದಲಾದವರ ಮೇಲ್ನೋಟದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಸಂಗ್ರಹಿಸಲಾದ ಮೊತ್ತದಿಂದ ಕಿಟ್ ಖರೀದಿಸಿ ಹಸ್ತಾಂತರಿಸಲಾಯಿತು ಎಂದು ಸಂಘಟನೆ ತಿಳಿಸಿದೆ.
ಇದಕ್ಕೆ ಸಹಕರಿಸಿದ ಎಲ್ಲಾರಿಗೂ ರಾಜ್ಯ ದಾರಿಮಿ ಒಕ್ಕೂಟ ಅಭಿನಂದನೆ ಸಲ್ಲಿಸಿದೆ