×
Ad

ಡಾ. ಶಕೀಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅರ್ಹ ಕುಟುಂಬಗಳಿಗೆ ಅಕ್ಕಿ ವಿತರಣೆ

Update: 2021-05-30 16:37 IST

ಕೊಣಾಜೆ : ಡಾ.ಶಕೀಲ್ ಚಾರಿಟೇಬಲ್ ಟ್ರಸ್ಟ್ ದೇರಳಕಟ್ಟೆ  ಇದರ ಆಶ್ರಯದಲ್ಲಿ 3000 ಅರ್ಹ ಬಡ ಕುಟುಂಬ ಗಳಿಗೆ ಅಕ್ಕಿ ವಿತರಣೆ ಕಾರ್ಯಕ್ರಮವು ರವಿವಾರ ದೇರಳಕಟ್ಟೆಯ ನೇತಾಜಿ ಸುಬಾಶ್ಚಂದ್ರಬೋಸ್ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕೊಣಾಜೆ ಪೋಲಿಸ್ ಠಾಣೆಯ ಅಧಿಕ್ಷಕ  ಮಲ್ಲಿಕಾರ್ಜುನ, ಕೊರೋನ ಸಮಯದಲ್ಲಿ ಯಾರೂ ಕೂಡಾ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ  ಕೆಲವು ಸಮಾಜ ಸೇವಾ ಸಂಘಟನೆಗಳು ಸೌಹಾರ್ದತೆಯೊಂದಿಗೆ ಇಂತಹ ಕಾರ್ಯಕ್ರಮ ಆಯೋಜಿಸುತ್ತಿರು ವುದು ಶ್ಲಾಘನೀಯವಾಗಿದೆ. ಇಂತಹ ಕೆಲಸಗಳು ಸಮಾಜದಲ್ಲಿ ಹೆಚ್ಚೆಚ್ಚು ನಡೆಯಬೇಕಿದೆ ಎಂದರು.

ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ  ರವೀಂದ್ರ‌ ಕೆ.ಶೆಟ್ಟಿ ಉಳಿದೊಟ್ಟು, ಬೋಳಾ ನರಿಂಗಾನ ಚಚ್೯ ನ ಧರ್ಮ ಗುರು ಫಾದರ್ ಮೈಕಲ್, ರೆಂಜಾಡಿ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಮೊಹಮ್ಮದ್ ಹನೀಫ್,  ಶ್ರೀ ಅಯ್ಯಪ್ಪ ಸ್ವಾಮೀ ದೇವಸ್ಥಾನದ  ಸಮಿತಿ ಅಧ್ಯಕ್ಷ ಜಗದೀಶ್ ರೈ,  ಬೆಳ್ಮ ಗ್ರಾ.ಪಂ ಆಧ್ಯಕ್ಷ ಬಿ.ಎಂ ಅಬ್ದುಲ್‌ ಸತ್ತಾರ್, ಎಸ್ ಕೆಎಸ್ಸೆಸ್ಸಫ್ ಉಳ್ಳಾಲ ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ದಾರಿಮಿ, ದೇರಳಕಟ್ಟೆ ಬದ್ರಿಯ ಜುಮಾ‌ ಮಸೀದಿಯ ಅಧ್ಯಕ್ಷ ಹಾಜಿ ಅಬೂಬಕ್ಕರ್, ಕಾರ್ಯದರ್ಶಿ ಆರ್.ಅಹ್ಮದ್ ಶೇಟ್, ಬೆಳ್ಮ ಗ್ರಾ.ಪಂ ಸದಸ್ಯರಾದ ಎಂ.ಎ ಅಬ್ದುಲ್ಲಾ ರೆಂಜಾಡಿ, ಇಬ್ರಾಹಿಂ ಬದ್ಯಾರ್, ಹನೀಫ್ ಬದ್ಯಾರ್, ಸತ್ತಾರ್ ರೆಂಜಾಡಿ, ಇಕ್ಬಾಲ್ ಎಚ್.ಆರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಇಸ್ಮಾಯೀಲ್ ಪನೀರ್, ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯ ಪುಷ್ಟಿ ಡಿ.ಎಂ ಮುಹಮ್ಮದ್, ಹಿದಾಯಲ್ ಇಸ್ಲಾಂ ಮದರಸ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆಶ್ರಫ್ ಡಿ.ಎಂ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಅಬ್ದಲ್ ಖಾದರ್.ಐ, ಹಮೀದ್ ಮೂನ್ನೂರು, ರವಿರಾಜ್ ಶೆಟ್ಟಿ, ರಮೀಝ್ ಮೀಝಾ, ಹರ್ಷದ್ ಮಂಗಳಪೇಟೆ ಉಪಸ್ಥಿತರಿದರು.

ಇಕ್ಬಾಲ್ ಎಚ್.ಆರ್ ಸ್ವಾಗತಿದರು. ನೌಫಲ್.ಬಿ ವಂದಿಸಿದರು. ಶಫೀರ್ ಕಾರ್ಯಕ್ರಮ ನಿರೂಪಿಸಿದರು‌

ಕೋವಿಡ್ ನ ಎರಡನೇ ಅಲೆಯ ಪರಿಣಾಮ ಅದೆಷ್ಟೋ ಜನ ಉದ್ಯೋಗವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ.  ಕೊರೋನ ಸಂಕಷ್ಟದ ನಡುವೆ ಯಾರೂ ಕೂಡಾ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಡಾ.ಶಕೀಲ್ ಚಾರಿಟೇಬಲ್ ಟ್ರಸ್ಟ್ ಮೂಲಕ 3000 ಬಡ ಕುಟುಂಬಗಳಿಗೆ  ಮಸೀದಿ, ಚರ್ಚ್, ದೇವಸ್ಥಾನದ ಮೂಲಕ ಹಂಚಲಾಗಿದೆ.

- ಡಾ.ಶಕೀಲ್ , ಡಾ.ಶಕೀಲ್ ಚಾರಿಟೇಬಲ್ ಟ್ರಸ್ಟ್ ನ ನಿರ್ದೇಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News