×
Ad

ಮಧ್ಯಪ್ರದೇಶ: ಐದು ಕೆಜಿಗಿಂತ ಹೆಚ್ಚು ತೂಕದ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

Update: 2021-05-30 19:22 IST

ಮಾಂಡ್ಲಾ: ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 29 ವರ್ಷದ ಮಹಿಳೆಯೊಬ್ಬರು  5.1 ಕಿಲೋಗ್ರಾಂ ತೂಕದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವೈದ್ಯರು ರವಿವಾರ ತಿಳಿಸಿದ್ದಾರೆ.

ನವಜಾತ ಶಿಶುವಿನ ಸಾಮಾನ್ಯ ತೂಕವು 2.5 ಕೆಜಿ ಹಾಗೂ 3.7 ಕೆಜಿ ನಡುವೆ ಇರುವುದರಿಂದ ಇದು ಅಪರೂಪದ ಪ್ರಕರಣವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ರಕ್ಷಾ ಕುಶ್ವಾಹ ಎಂಬ ಮಹಿಳೆ ಶನಿವಾರ ಅಂಜನಿಯಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾಮಾನ್ಯ ಹೆರಿಗೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಮಗುವಿನ ತೂಕ 5.1 ಕೆಜಿ, ಇದು ನವಜಾತ ಶಿಶುವಿನ ಸರಾಸರಿ ತೂಕದ ದೃಷ್ಟಿಯಿಂದ ಅಪರೂಪ ಎಂದು ಆರೋಗ್ಯ ಕೇಂದ್ರದ ಉಸ್ತುವಾರಿ ಡಾ.ಅಜಯ್ ತೋಶ್ ಮರವಿ PTI ಗೆ ತಿಳಿಸಿದ್ದಾರೆ.

"ಮಗು ಆರೋಗ್ಯಕರವಾಗಿ ಜನಿಸಿದ್ದು ಒಳ್ಳೆಯದ್ದಾಗಿದೆ. ಆದರೆ  ಪರೀಕ್ಷೆಗಳನ್ನು ನಡೆಸಬೇಕಾಗಿದೆ. ರವಿವಾರ ಮಧ್ಯಾಹ್ನ ಸುಮಾರಿಗೆ ಮಗು ಮೂತ್ರ ವಿಸರ್ಜನೆಯಿಂದ ಕೆಲವು ಸಮಸ್ಯೆಗಳಿಂದ ಬಳಲುತ್ತಿದೆ. ಮಗುವನ್ನು ಮಾಂಡ್ಲಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಅವರು ಹೇಳಿದರು.

ಸಾಮಾನ್ಯವಾಗಿ, ಸಕ್ಕರೆ, ಬೊಜ್ಜು ಮತ್ತು ಹಾರ್ಮೋನುಗಳ ಸಮಸ್ಯೆಯಿರುವ ಮಹಿಳೆಯರು ಅಧಿಕ ತೂಕದ ಶಿಶುಗಳಿಗೆ ಜನ್ಮ ನೀಡುತ್ತಾರೆ. ಆದರೆ ಕುಶ್ವಾಹಾ ಅವರಿಗೆ ಮಧುಮೇಹವಿಲ್ಲ  ಎಂದು ಡಾ.ಮರವಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News