ಉಡುಪಿ ಜಿಲ್ಲೆಯಾದ್ಯಂತ ಸಿಐಟಿಯು ಸಂಸ್ಥಾಪನ ದಿನಾಚರಣೆ
ಉಡುಪಿ, ಮೇ 30: ದೇಶದ ಕಾರ್ಮಿಕ ಚಳುವಳಿಯ 51 ವರ್ಷಗಳ ಸಂದರ್ಭ ದೇಶದಾದ್ಯಂತ ಸಿಐಟಿಯು ಕರೆಯ ಮೇರೆಗೆ ಉಡುಪಿ ಜಿಲ್ಲೆಯಲ್ಲಿ ಇಂದು ಸಂಸ್ಥಾಪನ ದಿನವನ್ನು ಸಿಐಟಿಯು ಧ್ವಜಾರೋಹಣ ಮಾಡುವುದರ ಮೂಲಕ ಆಚರಿಸಲಾಯಿತು.
ಉಡುಪಿಯ ಸಿಐಟಿಯು ಕಚೇರಿ ಮುಂದೆ ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಸಿಐಟಿಯು ಉಡುಪಿ ಜಿಲ್ಲಾ ಖಜಾಂಚಿ ಶಶಿಧರ್ ಗೊಲ್ಲ, ಉಡುಪಿ ಜಿಲ್ಲಾ ಕಟ್ಟಡ ಸಂಘದ ಅಧ್ಯಕ್ಷ ಶೇಖರ್ ಬಂಗೇರ, ಸಿಐಟಿಯು ಉಡುಪಿ ತಾಲೂಕು ಕಾರ್ಯದರ್ಶಿ ಕವಿರಾಜ್. ಎಸ್., ವಿದ್ಯರಾಜ್, ಕಟ್ಟಡ ಸಂಘದ ಗೌರವಾಧ್ಯಕ್ಷ ದಯಾನಂದ ಕೋಟ್ಯಾನ್, ಸಂಜೀವ ಉಪಸ್ಥಿತರಿದ್ದರು.
ಕುಂದಾಪರದ ಹಂಚು ಕಾರ್ಮಿಕರ ಭವನದ ಎದುರು ಸಿಐಟಿಯು ಜಿಲ್ಲಾ ಅಧ್ಯಕ್ಷ ಕೆ.ಶಂಕರ್ ಧ್ವಜಾರೋಹಣ ಗೈದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿದರು. ತಾಲೂಕು ಸಂಚಾಲಕ ಎಚ್. ನರಸಿಂಹ, ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ, ಮುಖಂಡರಾದ ರವಿ ವಿ.ಎಂ., ಕೃಷ್ಣ, ಕಟ್ಟಡ ಕಾರ್ಮಿಕರ ಸಂಘದ ಮುಖಂಡರಾದ ರಾಜ ಬಿಟಿಆರ್, ಚಂದ್ರಪೂಜಾರಿ ಹಾಜರಿದ್ದರು.
ಸಿಐಟಿಯು ರಾಷ್ಟ್ರವ್ಯಾಪಿ ಬೇಡಿಕೆಯಾಗಿರುವ ಲಸಿಕೆ ನೀಡಿ ಜೀವ ಉಳಿಸಿ, ಪರಿಹಾರ ನೀಡಿ ಜೀವನ ರಕ್ಷಿಸಿ, ಉದ್ಯೋಗ-ವೇತನ ಸಂರಕ್ಷಿಸಲು ಆಗ್ರಹಿಸಲಾಯಿತು. ಇದೆ ವೇಳೆಯಲ್ಲಿ ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ ಯಿಂದ ಬೆಂಗಳೂರಿನಲ್ಲಿ ಉಧ್ಘಾಟನೆಗೊಂಡ ಕಾರ್ಮಿಕ ಕರ್ನಾಟಕ ಯೂ ಟೂಬ್ ಚಾನಲ್ನ್ನು ಜಿಲ್ಲೆಯ ನೂರಾರು ಕಾರ್ಮಿಕರು ವೀಕ್ಷಿಸಿದರು.
ಸಿಐಟಿಯು ಕಾರ್ಮಿಕ ಮುಖಂಡರು, ಕಾರ್ಯಕರ್ತರು ಮನೆ ಮನೆಗಳಲ್ಲಿ ಸಂಸ್ಥಾಪನ ದಿನಾಚರಣೆಯಲ್ಲಿ ಪಾಲ್ಗೊಂಡು ಕಾರ್ಮಿಕ ವರ್ಗತೆ ಐಕ್ಯತೆ ಚಿರಾಯುವಾಗಲು ಪ್ರತಿಜ್ಞೆ ಮಾಡಿದರು.