×
Ad

​ಜೂ.7ರ ನಂತರ ಸಂಪೂರ್ಣ ಲಾಗ್‌ಡೌನ್ ಆಗತ್ಯ ಇಲ್ಲ: ರಘುಪತಿ ಭಟ್

Update: 2021-05-30 19:43 IST

ಉಡುಪಿ, ಮೇ 30: ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವಿಟಿ ಪ್ರಮಾಣ ಕಡಿಮೆ ಆಗುತ್ತಿದ್ದು, ಆದುದರಿಂದ ಜೂ.7ರ ನಂತರ ಸಂಪೂರ್ಣ ಲಾಗ್‌ಡೌನ್ ಆಗತ್ಯ ಇಲ್ಲ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಅಭಿಪ್ರಾಯ ಪಟ್ಟಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆ ಯಲ್ಲಿ ಈಗ ಶೇ.18-19 ಪಾಸಿಟಿವಿಟಿ ಪ್ರಮಾಣ ಇದ್ದು, ಜೂ.7ರೊಳಗೆ ೆ ಪಾಸಿಟಿವಿಟಿ ಪ್ರಮಾಣ ಶೇ.10ಕ್ಕೆ ಇಳಿಯಬೇಕಾಗಿದೆ. ಅದಕ್ಕಾಗಿ ಸಾರ್ವಜನಿಕ ಸಭೆ- ಸಮಾರಂಭ, ಓಡಾಟ ಕಾರ್ಯಕ್ರಮಗಳಿಗೆ ನಿರ್ಬಂಧ ಹಾಕಬೇಕು ಎಂದರು.

ಈಗಾಗಲೇ ಲಾಕ್‌ಡೌನ್‌ನಿಂದ ಜನರ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದೆ. ಲಾಕ್‌ಡೌನ್ ಮುಂದು ವರೆಸಿದರೆ ಯಾವುದೇ ಉಪಯೋಗವಿಲ್ಲ. ಜಿಲ್ಲೆಯ ಜನತೆಯಲ್ಲಿ ಈಗ ಜಾಗೃತಿ ಮೂಡಿದೆ. ಮುಂದಿನ ಮೂರು ತಿಂಗಳು ಎಲ್ಲಾ ಸಭೆ ಸಮಾರಂಭಗಳಿಗೆ ನಿರ್ಬಂಧ ಹಾಕಬೇಕು ಎಂದು ಅವರು ಹೇಳಿದರು.

ಪಾಸಿಟಿವಿಟಿ ಪ್ರಮಾಣ ಅಧಿಕ ಇರುವ ಜಿಲ್ಲೆಗಳಲ್ಲಿ ಲಾಕ್‌ಡೌನ್ ಮುಂದು ವರೆಸಬೇಕು. ಕೊರೋನ ನಿಯಂತ್ರಣಕ್ಕೆ ಬರುತ್ತಿರುವುದು ನಮ್ಮ ಪ್ರಯತ್ನದಿಂದ ಅಲ್ಲ. ರೋಗ ನಿರೋಧಕ ಶಕ್ತಿಯಿಂದ ಈಗ ತನ್ನಿಂದ ತಾನೇ ಕೊರೋನ ನಿಯಂತ್ರಣಕ್ಕೆ ಬಂದಿದೆ. ಸಾಂಕ್ರಾಮಿಕ ರೋಗ ಒಂದು ಬಾರಿ ಎಲ್ಲಾ ಕಡೆ ವ್ಯಾಪಿಸಿದೆ. ಜನ ಲಾಕ್‌ಡೌನ್ ಮುಗಿಯಿತು ಎಂದು ಮೈಮರೆಯಬಾರದು. ಶೇ.70 ಲಸಿಕೆ ಆಗುವವರೆಗೆ ಜನ ಬಹಳ ಜಾಗೃತಿ ಯಾಗಲೇಬೇಕು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News