ಮಂಗಳೂರು : ಮೋದಿ ರಾಜೀನಾಮೆಗೆ ಆಗ್ರಹಿಸಿ ಭಿತ್ತಿಪತ್ರ ಪ್ರದರ್ಶನ
Update: 2021-05-30 19:55 IST
ಮಂಗಳೂರು : ದ.ಕ.ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳ ಕಾರ್ಯಕರ್ತರು ರವಿವಾರ ತಮ್ಮ ಮನೆಗಳಲ್ಲೇ ಪ್ರಧಾನಿ ನರೇಂದ್ರ ಮೋದಿಯ ರಾಜೀನಾಮೆಗೆ ಆಗ್ರಹಿಸಿ ಭಿತ್ತಿ ಪತ್ರ ಪ್ರದರ್ಶನ ಮಾಡಿದರು.
ಮೋದಿ ತೊಲಗಲಿ, ದೇಶ ಬೆಳಗಲಿ, ಜನತೆ ಬದುಕಲಿ, ನರೇಂದ್ರ ಮೋದಿಯವರೇ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ತೊಟ್ಟು ತೊಲಗಿ, ದೇಶದ ರಕ್ಷಣೆಗೋಸ್ಕರ ಹಾಗೂ ದೇಶದ ಜನರ ರಕ್ಷಣೆಗೋಸ್ಕರ ಮೋದಿ ರಾಜೀನಾಮೆ ನೀಡಲಿ, ನರೇಂದ್ರ ಮೋದಿಯವರೇ ದೇಶದ ಜನತೆಗೆ ನಿಮ್ಮ ಆವಶ್ಯಕತೆಯಿಲ್ಲ, ಆದುದರಿಂದ ನೀವು ರಾಜೀನಾಮೆ ಕೊಟ್ಟು ತೊಲಗಿ, ಮೋದಿ ತೊಲಗಲಿ ದೇಶ ರಕ್ಷಣೆ ಹೊಂದಲಿ ಇತ್ಯಾದಿ ಭಿತ್ತಿಪ್ರದರ್ಶನವು ಅಲ್ಲಲ್ಲಿ ಕಂಡು ಬಂದವು. ಉಳ್ಳಾಲದಲ್ಲಿ ಮಾನವ ಹಕ್ಕು ಹೋರಾಟಗಾರ ಕಬೀರ್ ಉಳ್ಳಾಲ್ ನೇತೃತ್ವದಲ್ಲಿ ಭಿತ್ತಿಪ್ರದರ್ಶನವು ನಡೆಯಿತು.