ಅನಗತ್ಯ ಓಡಾಟ: 38 ವಾಹನಗಳು ವಶ
Update: 2021-05-30 21:42 IST
ಉಡುಪಿ, ಮೇ 30: ಜಿಲ್ಲೆಯಲ್ಲಿ ಕಳೆದ 24ಗಂಟೆಗಳ ಅವಧಿಯಲ್ಲಿ ಅನಗತ್ಯ ವಾಗಿ ಸಂಚರಿಸುತ್ತಿದ್ದ 33 ದ್ವಿಚಕ್ರ ವಾಹನ, ಮೂರು ರಿಕ್ಷಾ, ಎರಡು ಕಾರು ಸೇರಿದಂತೆ ಒಟ್ಟು 38 ವಾಹನಗಳನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ.
ಉಡುಪಿ ಉಪವಿಭಾಗ ವ್ಯಾಪ್ತಿಯಲ್ಲಿ ಐದು ದ್ವಿಚಕ್ರ ವಾಹನ, ಕುಂದಾಪುರ ಉಪವಿಭಾಗದಲ್ಲಿ 28 ದ್ವಿಚಕ್ರವಾಹನ, ಮೂರು ರಿಕ್ಷಾ, ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.