×
Ad

ಉಡುಪಿ ವರ್ತಕರ ಸಂಘದಿಂದ ಪೊಲೀಸರಿಗೆ ನೆರವು

Update: 2021-05-30 21:45 IST

 ಉಡುಪಿ, ಮೇ 30: ಉಡುಪಿ ಜಿಲ್ಲಾ ವರ್ತಕರ ಸಂಘದಿಂದ ರವಿವಾರ ಕೇಳಾರ್ಕಳ್‌ಬೆಟ್ಟುವಿನ ಕೊರೋನ ಪೀಡಿತರ ಮನೆಗೆ ಹಾಗೂ ಪರಿಸರದ 6 ಮನೆಗಳಿಗೆ ಮತ್ತು ಉಡುಪಿ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ ರಿಗೆ ಹಣ್ಣು ಹಂಪಲು, ಬಿಸ್ಕೆಟ್, ಬೇಕರಿ ತಿನಿಸು, ಮಾಸ್ಕ್, ನೀರಿನ ಬಾಟಲ್ ಗಳನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಐರೋಡಿ ಸಹನಶೀಲ ಪೈ, ಉಪಾಧ್ಯಕ್ಷ ವಸಂತ, ಕಾರ್ಯದರ್ಶಿ ನಾಗರಾಜ್ ಅಡಿಗ, ವಿಶ್ವನಾಥ್ ಗಂಗೊಳ್ಳಿ, ಕ್ರೀಡಾ ಪಟು ಅರುಣಕಲಾ, ಅನುಶ್ರೀ, ಶ್ರೀಧರ್ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News