×
Ad

ವಲಸೆ ಕಾರ್ಮಿಕರಿಗೆ ಕೊರೋನ ಪರೀಕ್ಷಾ ಶಿಬಿರ

Update: 2021-05-30 21:54 IST

ಉಡುಪಿ, ಮೇ 30: ಬೀಡಿನಗುಡ್ಡೆ ಅಂಗನವಾಡಿ ಕೇಂದ್ರದಲ್ಲಿ ಕಳೆದ ಒಂದು ವಾರಗಳಿಂದ ವಲಸೆ ಕಾರ್ಮಿಕರ ಗಂಟಲು ದ್ರವ ತಪಾಸಣೆ ಮೂಲಕ ಕೋರನಾ ರೋಗದ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದ್ದು, ಈವರೆಗೆ ಪರೀಕ್ಷಿಸಿದ 1350ಕ್ಕೂ ಅಧಿಕ ಮಂದಿಯ ಪೈಕಿ 35 ಮಂದಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.

ಶಾಸಕ ರಘುಪತಿ ಭಟ್ ಮಾರ್ಗದರ್ಶನದಲ್ಲಿ ಆರೋಗ್ಯ ಇಲಾಖೆ ಸಹಕಾರ ದಲ್ಲಿ ಉಡುಪಿ ನಗರದ ಒಳಕಾಡು ವಾರ್ಡಿನ ನಗರಸಭಾ ಸದಸ್ಯೆ ರಜನಿ ಹೆಬ್ಬಾರ್ ಮುತುವರ್ಜಿಯಲ್ಲಿ ಈ ಶಿಬಿರ ನಡೆಯುತ್ತಿದೆ. ಸೋಂಕಿತರನ್ನು ಈಗಾಗಲೇ ಚಿಕಿತ್ಸೆಗೆ ಒಳಪಡಿಸಿ ಗುಣಮುಖರನ್ನಾಗಿಸಲಾಗಿದೆ.

ಆರೋಗ್ಯ ಇಲಾಖೆಯ ಲ್ಯಾಬ್ ಟೆಕ್ನಿಶೆನ್ ಪ್ರಮೋದ್, ಕಿರಣ್ ಕುಮಾರ್, ಸುಧಾ, ರಶ್ಮಿತ್, ಮೀನಾಕ್ಷಿ, ಆಶಾ ಕಾರ್ಯಕರ್ತೆ ಹಿಮಾ, ಚಂದ್ರಾವತಿ, ಅಂಗನ ವಾಡಿ ಶಿಕ್ಷಕಿ ಪೂರ್ಣಿಮಾ, ಪ್ರೇಮ, ಅಫಿಯ ಭಾನು, ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್, ಮಂಜುನಾಥ್ ಹೆಬ್ಬಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News