×
Ad

​ಪ್ರತ್ಯೇಕ ಪ್ರಕರಣ: ಮೂವರ ಆತ್ಮಹತ್ಯೆ

Update: 2021-05-30 22:02 IST

ಉಡುಪಿ, ಮೇ 30: ಉಡುಪಿ ಪುತ್ತೂರು ಗ್ರಾಮದ ಕುದ್ಮಲ್ ರಂಗರಾವ್ ನಗರದ ಬಾಡಿಗೆ ಮನೆ ನಿವಾಸಿ ವಲಸೆ ಕಾರ್ಮಿಕ ಗ್ಯಾನಪ್ಪ ನರಿಯಪ್ಪ ಕುರಿ(23) ಎಂಬವರು ವೈಯಕ್ತಿಕ ವಿಚಾರಕ್ಕೆ ಮನನೊಂದು ಮೇ 29ರಂದು ರಾತ್ರಿ ಮನೆಯ ಮಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ವೈಯಕ್ತಿಕ ಕಾರಣದಿಂದ ಮನನೊಂದ ವಕ್ವಾಡಿ ಹೆಗ್ಗಾರಬೈಲು ದೇವಸ್ಥಾನ ಹತ್ತಿರ ನಿವಾಸಿ ನಾಗರತ್ನ ಸುವರ್ಣ(70) ಎಂಬವರು ಮೇ 28 ರಂದು ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಂಕರನಾರಾಯಣ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಯಡಮೊಗ್ಗೆ ಗ್ರಾಮದ ಗುಮ್ಟಿಬೇರು ನಿವಾಸಿ ಆನಂದ ಶೆಟ್ಟಿ(58) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಮೇ 29ರಂದು ರಾತ್ರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News