ಎತ್ತು ಗುದ್ದಿ ಮಹಿಳೆ ಮೃತ್ಯು
Update: 2021-05-30 22:07 IST
ಶಂಕರನಾರಾಯಣ, ಮೇ 30: ಎತ್ತೊಂದು ಗುದ್ದಿದ ಪರಿಣಾಮ ಮಹಿಳೆ ಯೊಬ್ಬರು ಮೃತಪಟ್ಟ ಘಟನೆ ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದ ಸುರ್ಗೋಳ್ಳಿ ಅಬ್ಬಿಕಟ್ಟೆ ಎಂಬಲ್ಲಿ ನಡೆದಿದೆ.
ಮೃತರನ್ನು ಅಬ್ಬಿಕಟ್ಟೆಯ ಸುಬ್ರಾಯ ನಾಯ್ಕ ಎಂಬವರ ಪತ್ನಿ ಸೀತು (52) ಎಂದು ಗುರುತಿಸಲಾಗಿದೆ. ಇವರು ಮೇ 18ರಂದು ಕೊಟ್ಟಿಗೆಯಲ್ಲಿದ್ದ ದನವನ್ನು ಮೇಯಲು ಕಟ್ಟಲು ಹೋದಾಗ ಅಲ್ಲಿಯೇ ಮೇಯಲು ಬಿಟ್ಟ ಎತ್ತು ಅವರಿಗೆ ಗುದ್ದಿತ್ತೆನ್ನಲಾಗಿದೆ. ಇದರ ಪರಿಣಾಮ ಕುತ್ತಿಗೆಗೆ ಗಂಭೀರ ಸ್ವರೂಪದ ಗಾಯ ಗೊಂಡು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೇ 29ರಂದು ರಾತ್ರಿ ಮೃತಪಟ್ಟರು.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.