×
Ad

ಮಂಗಳೂರು : ಸಿಐಎಸ್ ಎಫ್ ಕಚೇರಿಗೆ ಇ-ಮೇಲ್ ಮೂಲಕ ಬೆದರಿಕೆ; ದೂರು

Update: 2021-05-30 22:16 IST

ಮಂಗಳೂರು : ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಿಐಎಸ್ ಎಫ್ ಕಚೇರಿಯ ಇ-ಮೇಲ್ ಗೆ ಅನಾಮಧೇಯ ವ್ಯಕ್ತಿಯೊಬ್ಬ ಇ-ಮೇಲ್ ಮೂಲಕ ಬೆದರಿಕೆ ಹಾಕಿರುವ ಬಗ್ಗೆ ದೂರು ದಾಖಲಾಗಿದೆ.

ಎ.23ರಂದು ಸಿಐಎಸ್ ಎಫ್ ಕಚೇರಿಗೆ ಅನಾಮಧೇಯ ವ್ಯಕ್ತಿಯೊಬ್ಬ ಇಮೇಲ್ ಕಳುಹಿಸಿದ್ದು  'whats up? Am terrorist  ಎಂದು ಸಂದೇಶ ರವಾನಿಸಿದ್ದಾನೆ.

ಈ ಬಗ್ಗೆ ಮೇ 29ರಂದು ಬಜಪೆ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಕರಣವನ್ನು ಹೆಚ್ಚಿನ ತನಿಖೆಗೆ ನಗರ ಸೈಬರ್ ಠಾಣೆಗೆ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News