ಯುಎಸ್‌ ವಿಮಾನ ದುರಂತದಲ್ಲಿ ʼಟಾರ್ಝನ್‌ʼ ನಟ ಜೋ ಲಾರಾ, ಪತ್ನಿ ಸಾವು: ವರದಿ

Update: 2021-05-31 07:59 GMT

ವಾಶಿಂಗ್ಟನ್:‌ ಯುನೈಟೆಡ್‌ ಸ್ಟೇಸ್‌ ನ ನ್ಯಾಶ್‌ ವಿಲ್ಲೆ ಬಳಿಯ ಸರೋವರದಲ್ಲಿ ವಿಮಾನವೊಂದು ಅಪಘಾತಕ್ಕೀಡಾದ ಬಳಿಕ ಅದರಲ್ಲಿದ್ದ ಎಲ್ಲ ಏಳು ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾಗಿ ವರದಿಯಾಗಿತ್ತು. ಮೃತಪಟ್ಟವರಲ್ಲಿ ಖ್ಯಾತ ಹಾಲಿವುಡ್‌ ಸಿನಿಮಾ ʼಟಾರ್ಝನ್‌ʼ ನ ನಟ ಜೋ ಲಾರಾ ಹಾಗೂ ಅವರ ಪತ್ನಿಯೂ ಸೇರಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾಗಿ ndtv.com ವರದಿ ಮಾಡಿದೆ.

ಟೆನ್ನೆಸ್ಸೀ ವಿಮಾನ ನಿಲ್ದಾಣದಿಂದ ಹೊರಟ ಸ್ವಲ್ಪ ಸಮಯದ ನಂತರ ಶನಿವಾರ ಬೆಳಗ್ಗೆ 11 ಗಂಟೆಯ ವೇಳೆ ಸಣ್ಣ ಜೆಟ್‌ ಅಪಘಾತಕ್ಕೀಡಾಗಿದೆ ಎಂದು ರುದರ್‌ಫೋರ್ಡ್ ಕೌಂಟಿ ಫೈರ್ & ಪಾರುಗಾಣಿಕಾ (ಆರ್‌ಸಿಎಫ್ಆರ್) ಫೇಸ್‌ಬುಕ್‌ನಲ್ಲಿ ತಿಳಿಸಿದೆ.

ವಿಮಾನವು ನ್ಯಾಶ್ವಿಲ್ಲೆಯಿಂದ ದಕ್ಷಿಣಕ್ಕೆ 12 ಮೈಲಿ (19 ಕಿಲೋಮೀಟರ್) ದೂರದಲ್ಲಿರುವ ಪರ್ಸಿ ಪ್ರೀಸ್ಟ್ ಸರೋವರಕ್ಕೆ ಇಳಿಯಿತು. ವಿಮಾನದಲ್ಲಿ ಒಟ್ಟು 7 ಮಂದಿ ಪ್ರಯಾಣಿಕರಿದ್ದ ಕುರಿತು ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ದೃಢಪಡಿಸಿದೆ ಎಂದು CNN ವರದಿ ಮಾಡಿದೆ.

ಲಾರಾ 1989 ರ ಟೆಲಿವಿಷನ್ ಚಲನಚಿತ್ರ "ಟಾರ್ಝನ್ ಇನ್ ಮ್ಯಾನ್ಹ್ಯಾಟನ್" ನಲ್ಲಿ ಟಾರ್ಝನ್ ಪಾತ್ರವನ್ನು ನಿರ್ವಹಿಸಿದ್ದರು. ನಂತರ ಅವರು 1996-1997ರವರೆಗೆ ನಡೆದ "ಟಾರ್ಝನ್: ದಿ ಎಪಿಕ್ ಅಡ್ವೆಂಚರ್ಸ್" ಎಂಬ ದೂರದರ್ಶನ ಸರಣಿಯಲ್ಲಿ ನಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News