×
Ad

ಮೂಡುಬಿದಿರೆ : ಮಾಜಿ ಸಚಿವ ಅಭಯಚಂದ್ರ ಜೈನ್ ಹುಟ್ಟುಹಬ್ಬದ ಪ್ರಯುಕ್ತ ಪೌರಕಾರ್ಮಿಕರಿಗೆ ಕಿಟ್ ವಿತರಣೆ

Update: 2021-05-31 19:45 IST

ಮೂಡುಬಿದಿರೆ : ಮಾಜಿ ಸಚಿವ ಅಭಯಚಂದ್ರ ಜೈನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮೂಡಬಿದಿರೆಯ ಪುರಸಭಾ ವ್ಯಾಪ್ತಿಯ ಸುಮಾರು 57 ಪೌರ ಕಾರ್ಮಿಕರಿಗೆ ಆಹಾರ ಕಿಟ್ ಮತ್ತು ಹೋಮ್ ಐಸೊಲೇಷನ್ ಕಿಟ್ ವಿತರಣಾ ಕಾರ್ಯಕ್ರಮ ಸೋಮವಾರ ನಡೆಯಿತು.

ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಅಭಯಚಂದ್ರ ಜೈನ್ ಹಾಗೂ ಜಿಲ್ಲಾ ಕಾಂಗ್ರೆಸ್ ನಾಯಕರಾದ ಮಿಥುನ್ ರೈ ಭಾಗವಹಿಸಿದ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಲೇರಿಯನ್ ಸಿಕ್ವೇರಾ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಜಯ ಕುಮಾರ್ ಶೆಟ್ಟಿ, ವಕ್ತರರಾದ ರಾಜೇಶ್ ಕಡಲಕೆರೆ, ನಾಯಕರಾದ ಸುರೇಶ್ ಕೋಟ್ಯಾನ್, ಕೊರಗಪ್ಪ, ಜೊಸ್ಸಿ ಮೆನೆಜಸ್, ಪುರಂದರ ದೇವಾಡಿಗ, ಕಲ್ಲಬೆಟ್ಟು ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಪ್ರವೀಣ್ ಜೈನ್, ಅರುಣ್ ಕುಮಾರ್ ಶೆಟ್ಟಿ, ಚಂದ್ರಹಾಸ್ ಸನಿಲ್, ಕರಿಮ್, ಸುರೇಶ್ ಪ್ರಭು, ನಿತೀನ್ ಬೆಳುವಾಯಿ, ಕಿರಣ್ ಕುಮಾರ್, ಕುಮಾರ್ ಪೂಜಾರಿ, ವಾಸುದೇವ್ ನಾಯಕ್, ಸತೀಶ್, ರೇಕ್ಸಾನ್ ಪಿಂಟೊ, ರಿಹಾನ್ ಬೆಳುವಾಯಿ, ಪ್ರವೀಣ್ ಮೆಂಡೊನ್ಸಾ, ಸುಕುಮಾರ್ ಜೈನ್, ನಿಸ್ಸಾಮ್ , ಗಣೇಶ್, ಸಂತೋಷ್ ಶೆಟ್ಟಿ, ಕ್ಲಾರಿಯೊ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News