ಕಾಪು: ಮಜೂರು ನಿವಾಸಿ ಮಸ್ಕತ್‌ನಲ್ಲಿ ನಿಧನ
Update: 2021-05-31 21:10 IST
ಕಾಪು, ಮೇ 31: ಮಜೂರು ಕರಂದಾಡಿ ನಿವಾಸಿ ಉಮ್ಮರಬ್ಬ ಅವರ ಪುತ್ರ ಮೊಯ್ಯದ್ದೀನ್ (44) ಅನಾರೋಗ್ಯದಿಂದ ಮೇ 30ರಂದು ರಾತ್ರಿ ಮಸ್ಕತ್ ನ ಒಮನ್‌ನಲ್ಲಿ ನಿಧನರಾದರು.
ಮಜೂರು ಸಿರಾಜುಲ್ ಹುದಾ ಧಪ್ ಕಮಿಟಿ ಪ್ರಧಾನ ಕಾರ್ಯದರ್ಶಿ, ಮಜೂರು ಮಲ್ಲಾರು ಬದ್ರಿಯಾ ಜುಮಾ ಮಸೀದಿಯ ತಖ್ವಿಯತುಲ್ ಇಸ್ಲಾಮ್ ಯಂಗ್‌ಮೆನ್ಸ್ ಸಕ್ರೀಯ ಸದಸ್ಯರಾಗಿದ್ದರು. ಇವರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಮಸೀದಿ ಅಧ್ಯಕ್ಷ ಇಬ್ರಾಹಿಂ ಐಡಿಯಲ್, ಯಂಗ್ಸ್‌ಮೆನ್ಸ್ ಅಧ್ಯಕ್ಷ ಮುಹಮ್ಮದ್ ಕರಂದಾಡಿ, ದಫ್ ಕಮಿಟಿ ಅಧ್ಯಕ್ಷ ಮುಹಮ್ಮದ್ ಮಜೂರು, ಉಮರುಬುಲ್ ಖತ್ತಬ್ ಸ್ವಲಾತ್ ಕಮಿಟಿ ಅಧ್ಯಕ್ಷ ಮುಹಮ್ಮದ್ ಸುಲ್ತಾನ್ ನಗರ ಸಂತಾಪ ವ್ಯಕ್ತಪಡಿಸಿದ್ದಾರೆ.