ಉಡುಪಿ ಜಿಲ್ಲೆಯ ಮಹಿಳೆಯಲ್ಲಿ ಕಪ್ಪು ಶಿಲೀಂದ್ರ ಸೋಂಕು ಪತ್ತೆ
Update: 2021-05-31 21:20 IST
ಉಡುಪಿ, ಮೇ 31: ಕುಂದಾಪುರ ತಾಲೂಕು ಕೊಡೇರಿಯ 64 ವರ್ಷ ಪ್ರಾಯದ ಮಹಿಳೆಯಲ್ಲಿ ಇಂದು ಕಪ್ಪು ಶಿಲೀಂದ್ರದ ಸೋಂಕು ಪತ್ತೆಯಾಗಿದೆ. ಇವರು ಮಣಿಪಾಲದ ಕೆಎಂಸಿಗೆ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಆರೆಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಈ ಮೂಲಕ ಜಿಲ್ಲೆಯ ಒಟ್ಟು ನಾಲ್ಕು ಮಂದಿ ಈ ಸೋಂಕಿಗಾಗಿ ಈಗ ಮಣಿಪಾಲ ಕೆಎಂಸಿಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಇವರಲ್ಲಿ ಕಡೆಕಾರಿನ 55 ವರ್ಷದ ಪುರುಷ ನಿನ್ನೆ ಆಸ್ಪತ್ರೆಗೆ ದಾಖಲಾದರೆ, ಗಂಗೊಳ್ಳಿ ಮತ್ತು ಪೆರ್ಡೂರಿನ ಇಬ್ಬರು ಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತಿದ್ದಾರೆ ಎಂದು ತಿಳಿದುಬಂದಿದೆ.
ಉಡುಪಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾದ ಇಬ್ಬರು ಇದೀಗ ಮಂಗಳೂರಿನ ವೆನ್‌ಲಾಕ್‌ಲ್ಲಿ ಚಿಕಿತ್ಸೆಯನ್ನು ಮುಂದುವರಿಸಿ ದ್ದಾರೆ. ಸಂತೆಕಟ್ಟೆಯ ಒಬ್ಬ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.