ಲಾಕ್‌ಡೌನ್: ಅಗನತ್ಯ ಓಡಾಡುತ್ತಿದ್ದ 48 ವಾಹನಗಳು ವಶ
Update: 2021-05-31 21:20 IST
ಉಡುಪಿ, ಮೇ 31: ಜಿಲ್ಲೆಯಲ್ಲಿ ಕಳೆದ 24ಗಂಟೆಗಳ ಅವಧಿಯಲ್ಲಿ ಅನಗತ್ಯ ವಾಗಿ ಸಂಚರಿಸುತ್ತಿದ್ದ 45 ದ್ವಿಚಕ್ರ ವಾಹನ, ನಾಲ್ಕು ಕಾರು ಸೇರಿದಂತೆ ಒಟ್ಟು 49 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉಡುಪಿ ಉಪವಿಭಾಗ ವ್ಯಾಪ್ತಿಯಲ್ಲಿ 8 ದ್ವಿಚಕ್ರ ವಾಹನ, ಕುಂದಾಪುರ ಉಪವಿಭಾಗದಲ್ಲಿ 37 ದ್ವಿಚಕ್ರವಾಹನಗಳು ಮತ್ತು ನಾಲ್ಕು ಕಾರುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಅದೇ ರೀತಿ ಕೋವಿಡ್ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಉಡುಪಿ ಮತ್ತು ಕುಂದಾಪುರದಲ್ಲಿ ತಲಾ ಒಂದು ಸೇರಿದಂತೆ ಒಟ್ಟು ಎರಡು ಪ್ರಕರಣಗಳು ದಾಖಲಾಗಿವೆ ಅಧಿಕಾರಿಗಳು ತಿಳಿಸಿದ್ದಾರೆ.