ಲಾಕ್‌ಡೌನ್: ಕೆಲಸ ಇಲ್ಲದ ಚಿಂತೆಯಲ್ಲಿ ಆತ್ಮಹತ್ಯೆ
Update: 2021-05-31 21:27 IST
ಉಡುಪಿ, ಮೇ 31: ಲಾಕ್‌ಡೌನ್‌ನಲ್ಲಿ ಕೆಲಸ ಇಲ್ಲದ ಚಿಂತೆಯಲ್ಲಿ ವ್ಯಕ್ತಿ ಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತರನ್ನು ಕಾರ್ಕಳ ಕುಕ್ಕುಂದೂರು ಜೋಡುರಸ್ತೆಯ ನಿವಾಸಿ ರಘುನಾಥ ಕಾಮತ್(64) ಎಂದು ಗುರುತಿಸಲಾಗಿದೆ. ಉಡುಪಿಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಇವರು ಲಾಕ್‌ಡೌನ್ ಕಾರಣ ಕೆಲಸ ಇಲ್ಲದೇ ಮಾನಸಿಕವಾಗಿ ನೊಂದಿದ್ದು.
ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಅವರು ಮೇ 27ರಂದು ಮನೆಯಿಂದ ಹೊರಗಡೆ ಹೋದವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರು ಮೇ 30ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿ ಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.