ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಮನವಿ
Update: 2021-05-31 21:58 IST
ಮಂಗಳೂರು, ಮೇ 31: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರ ನಿರ್ದೇಶನದ ಮೇರೆಗೆ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋರ ನೇತೃತ್ವದಲ್ಲಿ ಸೋಮವಾರ ಸಿ.ಡಿ ಸಂತ್ರಸ್ಥೆಯ ವಿಚಾರದಲ್ಲಿ ರಾಜ್ಯ ಸರಕಾರದ ನಡೆಯನ್ನು ಖಂಡಿಸಿ ಸಂತ್ರಸ್ಥೆಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಮತ್ತು ಮಹಿಳಾ ಆಯೋಗದ ಅಧ್ಯಕ್ಷರಿಗೆ ದ.ಕ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭ ಮಂಗಳೂರು ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಮಿತಾ ಡಿ ರಾವ್ , ಮಾಜಿ ಮೇಯರ್ ಜೆಸಿಂತಾ ವಿ. ಆಲ್ಫ್ರೆಡ್, ವಿದ್ಯಾ, ಪ್ರವೀತಾ, ಸಂಜನಾ ಛಲವಾದಿ ಉಪಸ್ಥಿತರಿದ್ದರು.